Back to List

Kagga 409 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮಾನುಷದ ಚರಿತೆ ಪರಸತ್ತ್ವಸಾಕ್ಷಾತ್ಕವಿತೆ । ಕಾಣಿಪುದದಾತ್ಮಸ್ವಭಾವದುದ್ಗಮವ ॥ ಏನಾಶೆ! ಯೇನು ಸಾಹಸ! ವೇನು ಭಂಗಗಳು! । ಆನುಭವವೇದವದು - ಮಂಕುತಿಮ್ಮ ॥ ೪೦೯ ॥

mAnuShada charite parasattva sAkShAt kavite । kANipudu adu AtmasvabhAvada udgamava ॥ EnAsheyu! Enu sAhasavu! Enu bhangagaLu! । AnubhavavEdavadu - Mankutimma ॥ 409 ॥

Meaning in Kannada

ಈ ಜಗತ್ತಿನಲ್ಲಿ ಮಾನವರ ಅಸ್ತಿತ್ವದ ಚರಿತ್ರೆಯು ಪರಮ ಚೇತನದ ಆತ್ಮಚರಿತ್ರೆಯ ಕವಿತೆಯಂತಿದೆ. ಅದು ಅಭಿವೃದ್ಧ್ಯಾಭಿಮುಖವಾದ ಆತ್ಮದ ಸ್ವಭಾವವನ್ನು ತೋರುತ್ತದೆ. ಮನುಷ್ಯ ದೇಹವನ್ನು ಧರಿಸಿದ ಚೇತನದ ಆಸೆ, ಸಾಹಸ, ಪ್ರಯತ್ನ. ನಿರಾಸೆ ಮುಂತಾದ ಅನುಭವಗಳನ್ನು ಸಮಗ್ರವಾಗಿ ‘ಅನುಭವವೇದ’ವೆಂದು ಕರೆದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The story of mankind is beautiful poetry composed by the cosmic spirit. In this poem we see the rise of the soul (self). What desires! What courage! What antics! What beautiful experiences! (as comparable to the vedas) - Mankutimma

Themes

LifeSelf

Video Section

Video Coming Soon

Detailed video explanations by scholars and experts will be available soon.