Mankutimmana Kagga by D.V. Gundappa
ಅದರಿಂದ ನೀತಿ ನಯವದರಿಂದ ಕುಲಗೋತ್ರ । ವದರಿಂದ ರಾಜ್ಯ ಮಠ ಧರ್ಮ ಸಂಸ್ಥೆಗಳು ॥ ಒದವುವದರಿಂದೆ ಮಮತಾನಾಶದವಕಾಶ- । ವದರಿನಾತ್ಮವಿಕಾಸ - ಮಂಕುತಿಮ್ಮ ॥ ೪೦೭ ॥
adarinda nIti nayavu adarinda kulagOtravu । adarinda rAjya maTha dharma samsthegaLu ॥ odavuvuad arinde mamatA nAshada avakAshavu । adarinAtmavikAsa - Mankutimma ॥ 407 ॥
ಹಿಂದಿನ ಮುಕ್ತಕದಲ್ಲಿ ಉಲ್ಲೇಖಗೊಂಡಿರುವ ನರ ನಾರಿಯರ ಪರಸ್ಪರ ಆಕರ್ಷಣೆ ಮತ್ತು ವ್ಯಾಮೋಹದಿಂದ ಮೊದಲಾಗಿ ಅತಿ ಒರಟನಾಗಿದ್ದ ಮನುಷ್ಯ, ಕಾಲಾನುಕಾಲಕ್ಕೆ ‘ನಯವನ್ನು’ ತನ್ನ ನಡವಳಿಕೆಯಲ್ಲಿ ತಂದುಕೊಂಡ, ತನ್ನದೇ ಬಾಳಿಗೆ ಒಂದು ನಿಯಮವನ್ನು ಸೃಷ್ಟಿಸಿಕೊಂಡು ಪಾಲಿಸತೊಡಗಿದ. ಅವನ ಕುಲಗಳು ಬೆಳೆದವು, ಗೋತ್ರಗಳು, ಹುಟ್ಟಿಕೊಂಡವು. ತತ್ಕಾರಣವಾಗಿ ರಾಜ್ಯ,ಮಠ,ಧರ್ಮ ಸಂಸ್ಥೆಗಳು ಹುಟ್ಟಿಕೊಂಡವು. ಇವನ ಅನುಭವ ಹೆಚ್ಚಾಗಿ, ಜ್ಞಾನ ಮೂಡಿ, ಬದುಕಿನ ನಶ್ವರತೆಯನ್ನು ಮನಗಂಡು, ಜಗತ್ತಿನ ಮೇಲಿನ ಮಮತೆಯನ್ನು ಕಡಿಮೆ ಮಾಡಿಕೊಳ್ಳುತ್ತಾ, ಅದರಿಂದ ಆತ್ಮ ವಿಕಾಸದತ್ತ ತನ್ನ ಗಮನ ಹರಿಸ ತೊಡಗಿದ, ಎನ್ನುವುದೇ, ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.
It (love between a man and a woman) leads to customs and traditions. Then to families and pride in dynasties. Nations, religious sects, moral framework and institutions follow. These again enable a person to shed his attachment and desire. From that follows the enrichment of the soul - Mankutimma
Video Coming Soon
Detailed video explanations by scholars and experts will be available soon.