Back to List

Kagga 405 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪರಬೊಮ್ಮ ಜೀವಭೇದದಿ ನಿಜೈಕ್ಯವ ಮರೆಯೆ । ಮರಳಿ ತನ್ನೊಟ್ಟನವನರಸಲೆಚ್ಚರಿಸಲ್ ॥ ನರನಾರಿಯರ ಪರಸ್ಪರ ಮೋಹದಲಿ ಮಾಯೆ । ನಿರವಿಸಿಹಳಂಕುಶವ - ಮಂಕುತಿಮ್ಮ ॥ ೪೦೫ ॥

parabomma jIvabhEdadi nijaikyava mereye । maraLi tanna oTTAnu avanu arasal echcharisal ॥ naranAriyara paraspara mOhadali mAye । nravisihaLu ankushava - Mankutimma ॥ 405 ॥

Meaning in Kannada

ಜಗತ್ತಿನ ಕೋಟ್ಯಾಂತರ ಜೀವ ಬೇದಗಳಲ್ಲಿ,ಆ ಪರಮಾತ್ಮನೇ ಚೇತನದ ರೂಪದಿ ಸೇರಿ, ತನ್ನ ನಿಜ ಸ್ವರೂಪವನ್ನು ಮರೆತು, ತನ್ನ ಸ್ವಸ್ಥಾನವನ್ನು ಮರೆತು ಇರುವಾಗ, ಅಲ್ಲಿಗೆ ಸೇರಲು ಆತ್ಮವನ್ನು ಎಚ್ಚರಿಸಲು, ನರ ನಾರಿಯರ ಪರಸ್ಪರ ಆಕರ್ಷಣೆಯಲ್ಲಿ, ಮಾಯೆ ಅಂಕುಶವನ್ನು ನಿರ್ಮಿಸಿದೆ ಎಂದು ಒಂದು ಗಹನವಾದ ತತ್ವವನ್ನು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The creator is one and only one. But he himself has materialized as so many beings. In this form, he has forgotten his earlier form (of whole). To get back to his original form, he has got Maya (illusion) create a hook to wake us up - that is love between a man and a woman. - Mankutimma

Themes

SelfLove

Video Section

Video Coming Soon

Detailed video explanations by scholars and experts will be available soon.