Mankutimmana Kagga by D.V. Gundappa
ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ । ಜಾವ ದಿನ ಬಂದು ಪೋಗುವುವು; ಕಾಲ ಚಿರ ॥ ಜೀವದ ವ್ಯಕ್ತಿ ಸಾಯ್ವುದು; ಜೀವಸತ್ವ ಚಿರ । ಭಾವಿಸಾ ಕೇವಲವ - ಮಂಕುತಿಮ್ಮ ॥ ೪೦೪ ॥
dEvarkaLudisi mareyaharu; dEvatva chira । jAva dina bandu pOguvuvu; kAla chira ॥ jIvada vyakta sAyvudu; jIvasatva chira । bhAvisA kEvalava - Mankutimma ॥ 404 ॥
ದೇವರುಗಳು ಉದಯಿಸಿ ಮರೆಯಾಗುತ್ತಾರೆ, ಆದರೆ ಅವರ ದೇವತ್ವ ಸದಾ ಇರುತ್ತದೆ. ಅವ್ಯಾಹತ ಕಾಲಪ್ರವಾಹದಲ್ಲಿ ಜಾವ, ದಿನ ವಾರಗಳು ಬಂದುಹೋಗುತ್ತವೆ, ಆದರೆ ಕಾಲ ನಿರಂತರ. ಹಾಗೆಯೇ ಒಬ್ಬ ವ್ಯಕ್ತಿ ಮರಣ ಹೊಂದಿದರೆ ಕಾಯ ಕೊನೆಯಾದರೂ ಆ ಕಾಯದಲ್ಲಿ ವಾಸಿಸಿದ ಚೇತನ ನಿರಂತರ. ಹೀಗೆ ಜಗತ್ತಿನ ಎಲ್ಲದರಲ್ಲಿ ಇದ್ದು, ಅದು ಇರುವ ವಸ್ತು ನಾಶವಾದರೂ, ತಾನು ಚಿರವಾಗಿ, ನಿರಂತರವಾಗಿ ಇರುವ "ಚೈತನ್ಯವನ್ನು" ಸದಾಕಾಲ ಭಾವಿಸು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Gods may rise and disappear. But divinity is permanent. Nights and days may come and go. But time remains. Beings may die. But life goes on. Imagine such a universal truth. - Mankutimma
Video Coming Soon
Detailed video explanations by scholars and experts will be available soon.