Mankutimmana Kagga by D.V. Gundappa
ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲಿ । ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು ॥ ಬೆಳಸು ಬೆಳಾಸಿನ ಸಾಲು ನಡುವೆ ಬದಿ ಗದ್ದೆಯಲಿ । ಉಳಿಗಳಿವಿನ ನೆರೆಯೊ - ಮಂಕುತಿಮ್ಮ ॥ ೪೦೩ ॥
hoLapu hoLapina naDuve biDuvinitu ratnadali । beLaku beLakina naDuve anitinitu neraLu ॥ beLasu beLAsina sAlu naDuve badi gaddeyali । uLigaLivina nereyo - Mankutimma ॥ 403 ॥
ಹೇಗೆ ರತ್ನಹಾರದಲ್ಲಿ ಒಂದು ರತ್ನಕ್ಕೂ ಮತ್ತೊಂದಕ್ಕೂ ಮಧ್ಯೆ ಚಿನ್ನದ ಗೆರೆಯಿರಿಸಿ ರತ್ನದ ಹೊಳಪನ್ನು ಅಧಿಕವಾಗಿಸುತ್ತಾರೋ, ಹೇಗೆ ನೆರಳು ತಾನಿದ್ದು ಬೆಳಕಿಗೆ ಪ್ರಾಮುಖ್ಯತೆ ನೀಡುತ್ತದೋ, ಹೇಗೆ ಹೊಲ ಗದ್ದೆಗಳಲ್ಲಿ ಪೈರ ಸಾಲ ನಡುವಿನ ಬದಿ ತನ್ನ ಚೌಕಟ್ಟಿನಲ್ಲಿರುವ ಬೆಳೆಯನ್ನು ಕಾಯುತ್ತದೋ, ಹಾಗೆಯೇ ಉಳಿವಿಗೆ ಅಳಿವು ಪೂರಕವಾಗಿರುತ್ತದೆ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
In between the brilliance of gems, there is gap (lackluster) in a necklace. Between streaks of light are some shadows. Between expanse of cultivated farm, there is boundaries where there is nothing. All the above things - gems, light and farms look beautiful (and meaningful) only when they exist with (and right next to) their antithesis. - Mankutimma
Video Coming Soon
Detailed video explanations by scholars and experts will be available soon.