Back to List

Kagga 402 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜವನ ನಿಂದಿಪುದೇಕೆ ಸರ್ವಘಾತಕನೆಂದು? । ಭುವಿಗೆ ವೃದ್ಧಸಮೃದ್ಧಿಯನು ಸುಮ್ಮನಿರಲ್ ॥ ನವಜನಕ್ಕೆಡೆಯೆತ್ತಲಾರುಮೆಡೆಬಿಡದೆ ನಿಲೆ? । ನವತೆಯವನಿಂ ಜಗಕೆ - ಮಂಕುತಿಮ್ಮ ॥ ೪೦೨ ॥

javana nindipudEke sarvaghAtakanendu? । bhuvige vRuddha samRuddhiyanu summaniral ॥ navajanakke eDe yettalu Arum eDebiDade nile? । navateyavanim jagake - Mankutimma ॥ 402 ॥

Meaning in Kannada

ಎಲ್ಲರನ್ನೂ ನಾಶಮಾಡುವವನೆಂದು ಆ ‘ಯಮರಾಯ’ನನ್ನು ನಿಂದಿಸುವುದೇಕೆ? ಅವನು ತನ್ನ ಕೆಲಸಮಾಡದೇ ಸುಮ್ಮನಿದ್ದರೆ, ಈ ಭೂಮಿಯಮೇಲೆ ಮುದುಕರೇ ಅಧಿಕವಾಗಿಬಿಡುತ್ತಾರೆ. ಇಲ್ಲಿರುವವರಾರೂ ಸ್ಥಳ ಬಿಡದೆ ಇಲ್ಲೇ ನೆಲೆ ನಿಂತರೆ ಹೊಸಜನ ಬರಲು ಆಸ್ಪದವೇ ಇರುವುದಿಲ್ಲ. ಹಾಗಾಗಿ ಆ ‘ಯಮ’ನಿಂದಲೇ ಈ ಜಗತ್ತಿಗೆ ಹೊಸತನ ಉಂಟಾಗುತ್ತದೆ ಎಂದು ಜನನ ಮರಣಗಳ ಸೂಕ್ಷ್ಮತೆಯನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Everybody hates Death since he puts an end to every ting we know. But just imagine what would happen if he just stopped working. This world would be filled with old people. If no one conceded any space, how could new people come to this world. Death brings freshness into this world. - Mankutimma

Themes

LifeDeathMoralitySocietyWarDuty

Video Section

Video Coming Soon

Detailed video explanations by scholars and experts will be available soon.