Back to List

Kagga 40 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ । ಶಶಿರವಿಗಳವನ ಮನೆಕಿಟಕಿಯಾಗಿರರೇಂ? ॥ ಮುಸುಕುಬೆಳಕೊಂದಾದ ಸಂಜೆಮಂಜೇನವನು । ಮಿಸುಕಿ ಸುಳಿಯುವ ಸಮಯ? - ಮಂಕುತಿಮ್ಮ ॥ ೪೦ ॥

nishiyoLEm kANabAranu hagalanolladoDe । shashi ravigaLu avana manekiTakiyAgirarEm? ॥ musukubeLakondAda sanjemanjenavanu । misuki suLiyuva samaya? - Mankutimma ॥ 40 ॥

Meaning in Kannada

ಹಗಲಲ್ಲಿ ಕಾಣಬಾರದೆಂತಾದರೆ, ರಾತ್ರಿಯಲ್ಲಿ ಏಕೆ ಕಾಣುವುದಿಲ್ಲ ಆ ಪರಮಾತ್ಮ. ರವಿ ಚಂದ್ರರು ಅವನ ಮನೆಯ ಕಿಟಕಿಗಳೇನು? ಇತ್ತ ಹಗಲೂ ಅಲ್ಲದೆ ನಿಶೆಯೂ ಅಲ್ಲದೆ ಇರುವ ಮುಸ್ಸಂಜೆಯ ಸಮಯವೇನು ಅವನು ಅಲೆದಾಡುವ ಸಮಯ ಎಂದು ಒಂದು ನೇರ ಪ್ರಶ್ನೆಯನ್ನು ಕೇಳುತ್ತಾರೆ. ಮಾನ್ಯ ಗುಂಡಪ್ಪನವರು.

Meaning & Interpretation

If he feels that daytime has too much light to his comfort, why does he not be seen even at night? Does he follow times according to cycles of Sun or Moon? Is the only time that he sneaks out when daylight fades into twilight? [Translator's note: This shloka is meant to question certain beliefs that some times in a day are more auspicious than others and Man can connect to God only then.] - Mankutimma

Themes

DevotionSociety

Video Section

Video Coming Soon

Detailed video explanations by scholars and experts will be available soon.