Back to List

Kagga 39 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ । ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ॥ ಒಸೆದೇತಕವನೀಯನೆಮಗೊಂದು ನಿಜಕುರುಹ । ನಿಶೆಯೊಳುಡುಕರದವೊಲು? - ಮಂಕುತಿಮ್ಮ ॥ ೩೯ ॥

pusiya nIm pusigaidu diTava kANbal osage । musuka taLedihanu parabommanu enuuvoDe ॥ osedEtake avau eeya nemagondu nijakuruha । nisheyoL uDukaradavolu? - Mankutimma ॥ 39 ॥

Meaning in Kannada

ಸುಳ್ಳನ್ನು ನೀನು ಸುಳ್ಳು ಎಂದು ಅರಿತುಕೊಂಡು ಸತ್ಯವನ್ನು ಕಾಣಲು ನಿನಗೆ ಸಹಾಯಮಾಡುವವನಂತಾದರೆ, ಆ ಪರಮಾತ್ಮನು ಮರೆಯಾಗಿ ಮುಸುಕು ಹಾಕಿಕೊಂಡಂತೆ ಇರುವುದಾದರೆ, ಅವನು ನಮ್ಮ ಮೇಲೆ ಪ್ರಸನ್ನನಾಗಿ, ರಾತ್ರಿ ಹೊತ್ತು ನಕ್ಷತ್ರದ ಕಿರಣಗಳು ನಮಗೆ ದಾರಿ ತೋರುವಂತೆ, ಒಂದು ಗುರುತನ್ನು ತನ್ನ ಇರುವಿಕೆಯ ಕುರುಹಾಗಿ ತೋರಿಸಬಾರದೇನು? ಇನ್ನುತ್ತಾರೆ ಶ್ರೀ ಗುಂಡಪ್ಪನವರು ಈ ಕಗ್ಗದಲ್ಲಿ. 

Meaning & Interpretation

Let us entertain a thought that the creator who is behind a veil wants man to call the bluff (detect lie as lie) and be capable of seeing the truth. Then why has he not given us any real clue to that effect - like moon light during a dark night? - Mankutimma

Themes

Wisdom

Video Section

Video Coming Soon

Detailed video explanations by scholars and experts will be available soon.