Mankutimmana Kagga by D.V. Gundappa
ಕಾಯಮಾತ್ರದುದಲ್ಲವಾತ್ಮಮಾತ್ರದುದಲ್ಲ- । ವಾಯೆರಡುಮೊಂದಾಗಲದು ಜೀವಲೀಲೆ ॥ ತಾಯಿವೊಲು ನಿನಗಾತ್ಮ, ಮಡದಿವೊಲು ಕಾಯವವ- । ರಾಯವನು ಸರಿನೋಡು - ಮಂಕುತಿಮ್ಮ ॥ ೩೯೯ ॥
kAyamAtradudallavu AtmamAtradudallavu । AyeraDum ondAgaladu jIvalIle ॥ tAyivolu ninagAtma, maDadivolu kAyavava- । rAyuvanu sarinODu - Mankutimma ॥ 399 ॥
ನಮ್ಮ ಜೀವನವು ಕೇವಲ ದೇಹದಿಂದಾಗಲೀ ಅಥವಾ ಕೇವಲ ಆತ್ಮದಿಂದಾಗಲೀ ನಡೆಯುವುದಿಲ್ಲ.ಇವರೆಡೂ ಒಂದಾದಾಗ ಮಾತ್ರ ಜೀವನ ಸಾಗುತ್ತದೆ. ಆತ್ಮ ತಾಯಿಯಂತಾದರೆ ದೇಹವು ಮಡದಿಯಂತೆ. ಹೇಗೆ ನಾವು ತಾಯಿ ಮತ್ತು ಮಡದಿಯರನ್ನು ಸಮಭಾವದಿಂದ ನೋಡಿಕೊಳ್ಳುತ್ತೇವೆಯೋ, ಅದೇ ರೀತಿ ದೇಹ ಮತ್ತು ಆತ್ಮಗಳ ಸಮನ್ವಯವನ್ನು ಕಾಯ್ದುಕೊಳ್ಳಬೇಕು ಎಂದು ದೇಹಾತ್ಮ ಸಂಬಂಧವನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"It is not about body alone. Neither is it about the soul alone. Only when both are fused into one, does the joy of life materialize. The soul is like your mother and the body is like your wife. You must watch their balance carefully." - Mankutimma
Video Coming Soon
Detailed video explanations by scholars and experts will be available soon.