Back to List

Kagga 400 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದೃಶ್ಯವೆಲ್ಲವು ನಶ್ಯವಾದೊಡೇಂ? ದೃಷ್ಟಿಗದು । ವಶ್ಯವಿರುವನಕದನು ದೃಷ್ಟಿಪುದೆ ಕಾರ್ಯಂ ॥ ವಿಶ್ವಾನುಭವವೆ ವಿಶ್ವಾತ್ಮಾನುಭವಕೆ ಪಥ । ನಶ್ಯದಿಂದವಿನಶ್ಯ - ಮಂಕುತಿಮ್ಮ ॥ ೪೦೦ ॥

dRushyavellavu nashyavAdoDEM? dRuShTigadu । vashyaviruvanakadanu dRushTipude kAryam ॥ vishvAnubhavave vishvAtma anubhavake patha । nashyadindavinashya - Mankutimma ॥ 400 ॥

Meaning in Kannada

ನಮಗೆ ಕಾಣುವುದೆಲ್ಲವೂ ನಾಶವಾಗುವಂತಹದ್ದಾದರೂ, ನಮ್ಮ ನೋಟದ ಪರಿಧಿಗೆ ಬಂದಾಗ ಅದು ಸತ್ಯವಾಗಿರುತ್ತದೆ ಹಾಗಾಗಿ ಕೇವಲ ನೋಡುವುದಷ್ಟೇ ನಮ್ಮ ಕರ್ತವ್ಯ. ವಿಶ್ವದ ಅನುಭವವೇ ವಿಶ್ವಾತ್ಮಾನುಭವಕ್ಕೆ ದಾರಿ ಮತ್ತು ನಾಶವಾಗುವುದರ ಮೂಲಕವೇ ಅವಿನಾಶಿಯಾದ ಆ ಪರಮಾತ್ಮನನ್ನು ಅರಿತುಕೊಳ್ಳಲು ಸಾಧ್ಯವೆಂದು ನಮ್ಮ ಬದುಕಿನಲ್ಲಿ ಸತ್ಯವಾದ ಅರಿವಿನ ಮತ್ತು ಅರಿವಿಗೆ ಮಾರ್ಗದ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"What if everything that can be seen is destroyed? We can not do anythinga about it. But to see whatever is accessible to our senses now is to be seen. Only by experiencing this world can we hope to reach the cosmic spirit or univesal soul. This is the only path from destructible to permanent" - Mankutimma

Themes

Life

Video Section

Video Coming Soon

Detailed video explanations by scholars and experts will be available soon.