Back to List

Kagga 398 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇರುವನ್ನಮೀ ಬಾಳು ದಿಟವದರ ವಿವರಣೆಯ । ಹೊರೆ ನಮ್ಮ ಮೇಲಿಲ್ಲ ನಾವದರ ಸಿರಿಯ ॥ ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುದು । ಪುರುಷಾರ್ಥಸಾಧನೆಯೊ - ಮಂಕುತಿಮ್ಮ ॥ ೩೯೮ ॥

iruvannamI bALu diTavadara vivaraNeya । hore namma mElilla nAvadara siriya ॥ piridAgisalu nintu yuktiyim duDiyuvudu । purushArthasAdhaneyo - Mankutimma ॥ 398 ॥

Meaning in Kannada

ನಾವು ಇರುವ ಬಾಳು ನಮ್ಮ ಮಟ್ಟಿಗೆ ಸತ್ಯವಾದದ್ದು. ಅದರ ವಿವರಣೆ ಮತ್ತು ವಿಶ್ಲೇಷಣೆ ಮಾಡುವ ಹೊಣೆ ಅಥವಾ ಜವಾಬುದಾರಿ ನಮ್ಮ ಮೇಲಿಲ್ಲ. ಅದನ್ನು ಕೇವಲ ಜಾಣ್ಮೆಯಿಂದ ಅನುಭವಿಸಿ, ಇದರ ಹಿರಿಮೆಯನ್ನು ಹೆಚ್ಚಿಸುವುದಕ್ಕೆ ಕ್ರಿಯಾಶೀಲರಾಗುವುದೇ, ನಮ್ಮ ಕರ್ತವ್ಯ ಎಂದು ನಮ್ಮ ಬಾಳನ್ನು ಹೇಗೆ ನಡೆಸಬೇಕು ಎನ್ನುವ ಮಂತ್ರವನ್ನು ನಮಗೆ ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Our life here is real. It is not up to us to discuss (and decide) how it came into existence. Let us leave that to God. We are here. We have to strive to make this place more beautiful and prosperous. We should think in those lines. It must be the goal of all our worldly endeavors." - Mankutimma

Themes

DevotionLifeDeathDetachment

Video Section

Video Coming Soon

Detailed video explanations by scholars and experts will be available soon.