Back to List

Kagga 393 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎನಿತೆನಿತ್ತು ವಿಕಾರ ಪರಿಣಾಮಗಳ ನಮ್ಮ । ಮನಕಾಗಿಪುವೊ ಲೋಕರೂಪಶಕ್ತಿಗಳು ॥ ಅನಿತನಿತು ಸತ್ಯತೆಯವಕ್ಕುಂಟು ಜೀವಿತದಿ । ಅನುಭವವೆ ದಿಟದಳತೆ - ಮಂಕುತಿಮ್ಮ ॥ ೩೯೩ ॥

enitenittu vikAra pariNAmagaLa namma । manakAgipuvo lOkarUpashaktigaLu ॥ anitanitu satyateyavakkunTu jIvitadi । anubhavave diTadaLAte - Mankutimma ॥ 393 ॥

Meaning in Kannada

ಈ ಜಗತ್ತಿನ ನಮ್ಮ ಬದುಕಿನಲ್ಲಿ, ಲೋಕದ ಆಗುಹೋಗುಗಳು ಮತ್ತು ಅವುಗಳಿಂದಾಗುವ ಪರಿಣಾಮಗಳು ನಮ್ಮ ಮನಸ್ಸಿಗೆ ಹಲವಾರು ವಿಕಾರಗಳನ್ನು ಅಂಟಿಸುತ್ತದೆ ನಮ್ಮ ಮಟ್ಟಿಗೆ ಅವು ಸತ್ಯವಲ್ಲವೇ? ಆ ಪರಿಣಾಮಗಳಿಂದಾಗುವ ಅನುಭವವೇ ನಮ್ಮ ಅರಿವಿಗೆ ಒಂದು ಮಾಪನ ಅಥವಾ ಅಳತೆ ಎಂದು ಜೀವನಾನುಭವದ ಮತ್ತು ಅದರಿಂದ ನಮ್ಮ ಮೇಲೆ ಆಗುವ ಪರಿಣಾಮದ ವಿಚಾರವನ್ನು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಪ್ರಸ್ತಾಪಮಾಡಿದ್ದಾರೆ.

Meaning & Interpretation

"The artifacts of this world distort the images in our mind. We can never be free of our prejudices. We can only believe those images cast on our mind are real. The measure of reality is only through the experiences. " - Mankutimma

Themes

Life

Video Section

Video Coming Soon

Detailed video explanations by scholars and experts will be available soon.