Back to List

Kagga 392 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸೌಂದರ್ಯ ಬಾಂಧವ್ಯಗಳನು ಬರಿದೆನಲಹುದೆ? । ಹೊಂದಿಸವೆ ಕುಂದಿಸವೆ ಜೀವಿಗಳನವುಗಳ್? ॥ ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು । ಅಂದಿಕೊಳಲದು ಬರಿದೆ? - ಮಂಕುತಿಮ್ಮ ॥ ೩೯೨ ॥

saundarya bAndhavyagaLanu baridenalahude? । hondisave kundisave jIvigaLanavugaL? ॥ sindhupUradi biddavaroLu obbarobbaranu । andikoLaladu baride? - Mankutimma ॥ 392 ॥

Meaning in Kannada

ಈ ಜಗತ್ತಿನ ಸೌಂದರ್ಯ ಮತ್ತು ಬಾಂಧವ್ಯಗಳನ್ನು ವ್ಯರ್ಥವೆಂದು ಹೇಳಬಹುದೇ? ಅವು ಜೀವಿಗಳನ್ನು ಒಬ್ಬರಿಗೊಬ್ಬರನ್ನು ಸೇರಿಸುತ್ತದೆ ಅಗಲಿಸುತ್ತದೆ, ಉಬ್ಬುವಂತೆ ಮಾಡುತ್ತದೆ ಮತ್ತು ಕುಗ್ಗುವಂತೆ ಮಾಡುತ್ತದೆ. ಪ್ರವಾಹದಲ್ಲಿ ಸಿಕ್ಕು ಕೊಚ್ಚಿಕೊಂಡು ಹೋಗುವಾಗ ಯಾರು ಸಿಕ್ಕರೆ ಅವರನ್ನು ಹಿಡಿದು ಪ್ರಾಣ ರಕ್ಷಣೆ ಮಾಡಿಕೊಳ್ಳುವುದಿಲ್ಲವೇ? ಅಂತಹ ಬಂಧನಗಳನ್ನು ಬರಿದಾದ ಬಂಧವೆನ್ನಲು ಸಾಧ್ಯವೇ? ಎಂದು, ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ವಿಚಾರವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Can you dismiss the beauty and love in this world as all illusion and false? Don't these very feelings get us together or make us sad? have you not seen strangers who are caught in the torrent (or at sea) cling to each other for dear life. We are also like that in this torrent of life and seeking eachother to get through it is very natural." - Mankutimma

Themes

LifeLove

Video Section

Video Coming Soon

Detailed video explanations by scholars and experts will be available soon.