Back to List

Kagga 391 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹುರಿಯುರುಳೆ ಹಾವಲ್ಲವಾದೊಡಂ ಮಬ್ಬಿನಲಿ । ಹರಿದಾಡಿದಂತಾಗೆ ನೋಳ್ಪಂಗೆ ಬೆದರಿ ॥ ಸುರಿಸುವಾ ಬೆವರು ದಿಟ; ಜಗವುಮಂತುಟೆ ದಿಟವು । ಜರೆಯದಿರು ತೋರ್ಕೆಗಳ - ಮಂಕುತಿಮ್ಮ ॥ ೩೯೧ ॥

huriyuruLe hAvallavAdoDam mabbinali । haridADidantAge nOLpange bedari ॥ surisuvA bevaru diTa; jagavumantuTe diTavu । jareyadiru tOrkegaLa - Mankutimma ॥ 391 ॥

Meaning in Kannada

ಕತ್ತಲಲ್ಲಿ ಹಗ್ಗವನ್ನು ಕಂಡು ಹಾವೆಂದು ತಿಳಿದು ಹೆದರಿ ಗಾಬರಿಗೊಂಡು ಬೆವರು ಸುರಿಸಿದಾಗ, ‘ ಅದು ಹಗ್ಗ;ಹಾವಲ್ಲ’ ವೆಂದು ‘ಸತ್ಯ’ ನಂತರ ಗೊತ್ತಾದರೂ, ಹರಿಸಿದ ಬೆವರು ಸತ್ಯವೇ ಅಲ್ಲವೇ? ಅದೇ ರೀತಿ ಈ ಜಗದ ವಿಷಯಗಳೂ ತನ್ನ ಸತ್ಯರೂಪವನ್ನು ತೋರಗೊಡದೆ, ನಮ್ಮನ್ನು ಹೆದರಿಸಿ ಬೆದರಿಸುತ್ತವೆ. ಸತ್ಯವಲ್ಲದಿದ್ದರೂ ತೋರಿಕೆಯ ರೂಪಗಳೇ ತಮ್ಮ ಪ್ರಭಾವವನ್ನು ಬೀರುತ್ತವೆ. ಹಾಗಾಗಿ ತೋರಿಕೆಗಳನ್ನು ತಿರಸ್ಕರಿಸಬೇಡ ಎಂದು ಜಗದ್ವಿಷಯಗಳನ್ನು ವಿಮರ್ಶಿಸಿದ್ದಾರೆ ಈ ಮುಕ್ತಕದಲ್ಲಿ.

Meaning & Interpretation

"When one sees a noose made of a rope in the dim light, he may think it is a snake. He is frightened and starts sweating. The fright and sweat are all real. But the snake is not. This world is also as real as that. Don't dismiss the appearances because everything is real as long as the feeling is real. " - Mankutimma

Themes

LifeMoralityLove

Video Section

Video Coming Soon

Detailed video explanations by scholars and experts will be available soon.