Back to List

Kagga 390 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸುಳ್ಳಲ್ಲ ಕಥೆಯ ತಿರುಕನು ಕಂಡ ಸವಿಗನಸು । ಚೆಲ್ಲಿತಲ್ಲವೆ ಹಿಟ್ಟು ಘಟವನವನೊದೆಯೆ? ॥ ಜಳ್ಳು ಸುಖದುಃಖವಿರಬಹುದಾದೊಡದರ ಮೊನೆ । ಮುಳ್ಳಹುದು ಜೀವಕ್ಕೆ - ಮಂಕುತಿಮ್ಮ ॥ ೩೯೦ ॥

suLLalla katheya tirukanu kanDa saviganasu । chellitallave hiTTu ghaTavanu avanodeye? ॥ jaLLu sukhadukhavu irabahudAdoDe adara mone । muLLahudu jIvakke - Mankutimma ॥ 390 ॥

Meaning in Kannada

ಮುಪ್ಪಿನ ಷಡಕ್ಷರಿ ಎಂಬ ಕವಿಯ "ತಿರುಕನ ಕನಸು" ಎಂಬ ಕವಿತೆಯ ಕಥೆಯನ್ನು ಉಲ್ಲೇಖ ಮಾಡುತ್ತಾ ಮಾನ್ಯ ಗುಂಡಪ್ಪನವರು ‘ಅವನು ಕಂಡದ್ದು ಕನಸೇ ಆದರೂ ಕನಸಿನ ಅಂತ್ಯದಲ್ಲಿ ಅವನು ತಾನು ತಿರುಪೆ ಎತ್ತಿ ತಂದಿದ್ದ ಹಿಟ್ಟಿನ ಮಡಕೆಯನ್ನು ಒದ್ದದ್ದು ವಾಸ್ಥವವಲ್ಲವೇ? ಹಾಗೆಯೇ ನಮ್ಮ ಜೀವನದಲ್ಲಿ ನಡೆಯುವ ಎಲ್ಲ ಘಟನೆಗಳೂ ಕನಸಂತೆ ಕಂಡರೂ ಅ ಘಟನೆಗಳಿಂದಾಗುವ ಪರಿಣಾಮಗಳು ನಮ್ಮ ಸ್ವಭಾವಕ್ಕೆ ಸೇರಿಕೊಂಡು ‘ಆತ್ಮದ’ ಗುಣವಾಗುತ್ತದೆ’ ಎಂದು ಕರ್ಮಶೇಷದ ಪ್ರಯಾಣದ ವಿಚಾರವನ್ನು ಮಂಡಿಸಿದ್ದಾರೆ, ಈ ಮುಕ್ತಕದಲ್ಲಿ.

Meaning & Interpretation

"The tale of the beggar kicking the foos in his sleep while dreaming is not fiction. It is everyone's life story. The whole world may be a dream, an illusion. But, its sting is very real." - Mankutimma

Themes

Life

Video Section

Video Coming Soon

Detailed video explanations by scholars and experts will be available soon.