Mankutimmana Kagga by D.V. Gundappa
ಕಾಯವನು ಮೃದ್ಭಾಂಡ ಮಾಂಸಪಿಂಡವೆನುತ್ತೆ । ಹೇಯವೆಂದೆಂದೊಡಾತ್ಮಂಗಪ್ಪುದೇನು? ॥ ಆಯುಧವನದನು ತೊರೆದಾತ್ಮನೇಂಗೈದಪನು । ನ್ಯಾಯ ತನುವಿಗಮಿರಲಿ - ಮಂಕುತಿಮ್ಮ ॥ ೩೮೯ ॥
kAyavanu mRudbhADa mAsapinDavenutte । hEyavendondoDAtmangappudEnu? ॥ ayudhavanadanu toredAtmanEngaidapanu । nyAya tanuvigamirali - Mankutimma ॥ 389 ॥
ನಮ್ಮ ದೇಹವನ್ನು ಕೇವಲ ಮಣ್ಣಿಂದ ಆದ ಮಡಕೆ ಅಥವಾ ಮೂಳೆ ಮಾಂಸದ ತಡಿಕೆ ಎಂದು ಅಸಹ್ಯ ಪಟ್ಟುಕೊಂಡರೆ ಆತ್ಮನಿಂದ ಏನೂ ಮಾಡಲಾಗುವುದಿಲ್ಲ. ಆತ್ಮನಿಗೆ ದೇಹವೊಂದು ಆಯುಧ. ಅದನ್ನು ತೊರೆದು ಆತ್ಮನೇನು ಮಾಡಬಲ್ಲ? ಹಾಗಾಗಿ ದೇಹಕ್ಕೂ ನ್ಯಾಯವನ್ನು ಒದಗಿಸು, ಅದನ್ನು ಸೊರಗಿಸಬೇಡ ಎನ್ನುವ ಅರ್ಥದಲ್ಲಿ ಈ ಮುಕ್ತಕದಲ್ಲೂ ದೇಹಾತ್ಮ ಸಂಬಂಧವನ್ನು ಕುರಿತು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
"If you consider this body as just a pot of mud filled with pieces of flesh, call it disgusting - then can you do justice to the soul. Body is the material through which the soul can prosper. If you make body weak then the sould loses its support. You must do justice to the body as well. " - Mankutimma
Video Coming Soon
Detailed video explanations by scholars and experts will be available soon.