Back to List

Kagga 388 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದೇಹಾತುಮಂಗಳೆರಡಂಗಗಳು ಜೀವನಕೆ । ನೇಹದಿಂದೊಂದನೊಂದಾದರಿಸೆ ಲೇಸು ॥ ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ? । ದ್ರೋಹ ಬೇಡೊಂದಕಂ - ಮಂಕುತಿಮ್ಮ ॥ ೩೮೮ ॥

dEha AtumangaLu eraDu angagaLu jIvanake । nEhadinda ondanondAdu arise lEsu ॥ dAhagonDiralondu mikkondakelli sukha? । drOha bEDa ondakam - Mankutimma ॥ 388 ॥

Meaning in Kannada

ನಮ್ಮ ಜೀವನಕೆ ದೇಹ ಮತ್ತು ಅತ್ಮಗಳೆರಡು ಅಂಗಗಳು. ಅವರೆಡೂ ಪರಸ್ಪರ ಸ್ನೇಹದಿಂದ ಇದ್ದರೆ ಒಳ್ಳೆಯದು. ಒಂದು ತನ್ನದೇ ಅವಶ್ಯಕತೆಗಳ ದಾಹದಲ್ಲಿ ಮುಳುಗಿಬಿಟ್ಟರೆ ಮತ್ತೊಂದಕ್ಕೆ ಸುಖವಿರುವುದಿಲ್ಲ. ಸಮತೋಲನವನ್ನು ಕಾಯುವು ಸಲುವಾಗಿ ಒಂದಕ್ಕೊಂದು ದ್ರೋಹಮಾಡಿಕೊಳ್ಳಬಾರದು ಎಂದು ದೇಹಾತ್ಮ ಸಂಬಂಧದ ಗಹನ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Body and spirit are both essential parts of life. They have to complement each other like friends. If one of them is left dry, where is happines for the other? You should not betray either one of them." - Mankutimma

Themes

LifeDeathSociety

Video Section

Video Coming Soon

Detailed video explanations by scholars and experts will be available soon.