Mankutimmana Kagga by D.V. Gundappa
ರದನೋದಯಜ್ವರಕೆ ಸಿಲುಕದಿಹ ಶಿಶುವಿರದು । ವಿಧಿಯೊದೆಗೆ ಸಿಕ್ಕದಿಹ ನರಜಂತುವಿರದು ॥ ಒದೆಪೆಟ್ಟು ಮುಗಿದಂದು ರಾಹುದಂಷ್ಟ್ರದೆ ಹೊರಟ । ವಿಧುಬಿಂಬವೋ ನೀನು - ಮಂಕುತಿಮ್ಮ ॥ ೩೮೭ ॥
radanOdayajvarake silukadiha shishuviradu । vidhiyodege sikkadiha narajantuviradu ॥ odepeTTu mugidandu rAhudanShTrade horaTa । <<needs correction>> vidhubimbavO nInu - Mankutimma ॥ 387 ॥
ಪ್ರತೀ ಶಿಶುವಿಗೂ ಒಸಡನ್ನು ಸೀಳಿಕೊಂಡು ‘ಹಲ್ಲು’ ಬರುವಾಗ ಜ್ವರ ಬರುತ್ತದೆ. ಪೂರ್ಣ ಹಲ್ಲು ಬಂದಾಗ ಆ ಜ್ವರ ಕದಿಮೆಯಾಗುತ್ತದೆ. ಹಾಗೆಯೇ ವಿಧಿ ಹೊರೆಸಿದ ನಮ್ಮ ಕರ್ಮಗಳನ್ನು ಅನುಭವಿಸಿ ಹೊರಬಂದಾಗ, ಗ್ರಹಣ ಮುಕ್ತರಾಗಿ ಅಧಿಕ ದೀಪ್ತಿಯಿಂದ ಪ್ರಜ್ವಲಿಸುವ ಸೂರ್ಯ ಚಂದ್ರರಂತೆ, ನಮ್ಮ ಉತ್ಸಾಹವೂ ಅಧಿಕವಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"When a baby is about grow teeth, it will go through the pain of desentry and fever. It is very natural and no child has ever escaped the fate. Once you get through it, you will come out stronger and brighter like the Moon escaping from the mouth of Rahu (after eclipse)." - Mankutimma
Video Coming Soon
Detailed video explanations by scholars and experts will be available soon.