Back to List

Kagga 386 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೃದಯದುಬ್ಬರವೇನು ಹೊಟ್ಟೆಯುಬ್ಬರದಂತೆ । ಅದರಿಳಿತ ಕೊರಳ ನಾದದ ಸದ್ದಿನಿಂದ ॥ ಅದೆ ನಗುವು ದುಗುಡಗಳು, ಅದೆ ಹೊಗಳು ತೆಗಳುಗಳು । ಅದನಿಳಿಸೆ ಶಾಂತಿಯೆಲೋ - ಮಂಕುತಿಮ್ಮ ॥ ೩೮೬ ॥

hRudayadubbaravEnu hoTTeyubbaradante । adariLita koraLa nAdada saddininda ॥ ade naguvu duguDagaLu, ade hogaLu tegaLugaLu । adaniLise shAntiyelO - Mankutimma ॥ 386 ॥

Meaning in Kannada

ಹೊಟ್ಟೆಯು ಹಸಿವಿನಿಂದ ಪರದಾಡುವಂತೆ, ಹೃದಯವೂ,ಮನಸ್ಸೂ ಪರದಾಡುತ್ತದೆ. ಭಾವನೆಯ ಹಸಿವಿನಿಂದ. ಆಹಾರವು ಕೊರಳ ನಾಳದಿಂದ ಒಳಹೊಕ್ಕಂತೆ ಹೃದಯದ ಅಬ್ಬರವೂ ಸಹ ಕೊರಳ ನಾಳದಿಂದಲೇ, ನಗು,ಕೋಪ, ಹೊಗಳಿಕೆ, ತೆಗಳಿಕೆ ಮುಂತಾದವುಗಳಾಗಿ ಒಳ ಹೊಕ್ಕು, ಹೊರ ಹೊಮ್ಮುತ್ತದೆ. ಈ ಎಲ್ಲ ರೀತಿಯ ಭಾವಗಳ ಶಮನದಿಂದಲೇ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"When the stomach is full, the uneasiness subsides when you burp - let out a relieving sound from the food pipe. What should one do when you feel full in the heart? You laugh, cry, praise, condemn and let it out. Once you let it out, you will feel relieved." - Mankutimma

Themes

MoralityLove

Video Section

Video Coming Soon

Detailed video explanations by scholars and experts will be available soon.