Back to List

Kagga 385 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದಾಸರೋ ನಾವೆಲ್ಲ ಶುನಕನಂದದಿ ಜಗದಿ । ವಾಸನೆಗಳೆಳೆತಕ್ಕೆ ದಿಕ್ಕು ದಿಕ್ಕಿನಲಿ ॥ ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು । ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ॥ ೩೮೫ ॥

dAsarO nAvella shunakanandadi jagadi । vAsanegaLu eLetakke dikku dikkinali ॥ pAshagaLu horage, konDigaLu nammoLagihavu । vAsanAkshaya mOksha - Mankutimma ॥ 385 ॥

Meaning in Kannada

ಹೇಗೆ ನಾಯಿಯು ಕೇವಲ ವಾಸನೆಯಿಂದ ವ್ಯಕ್ತಿ ಮತ್ತು ವಸ್ತುಗಳನ್ನು ಗುರುತು ಹಿಡಿಯುತ್ತದೆಯೋ ಹಾಗೆಯೇ ನಾವೆಲ್ಲಾ ಈ ಜಗತ್ತಿನ ಸಕಲ ದಿಕ್ಕುಗಳಲ್ಲಿರುವ ವಾಸನೆಗಳಿಂದ ಸೆಳೆಯಲ್ಪಡುತ್ತೇವೆ. ಸೆಳೆತಗಳು ಹೊರಗಿವೆ ಮತ್ತು ಅವುಗಳೊಂದಿಗೆ ಸೇರಿಕೊಳ್ಳಲು ಆಸೆಗಳೆಂಬ ಕೊಂಡಿಗಳು ನಮ್ಮ ಮನಸ್ಸಿನಲ್ಲಿವೆ. ಈ ಆಸೆಗಳು ಮತ್ತು ಆಶಾ ಪ್ರೇರಿತವಾದ ಸೆಳೆತಗಳು, ನಮ್ಮಲ್ಲಿ ಎಂದು ಸಂಪೂರ್ಣ ನಾಶವಾಗುವುದೋ, ಅಂದೇ ನಮಗೆ ಮುಕ್ತಿ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"We are all servants. We follow our desires like dogs follow the scent (of food) in all directions. The strings that yank us (the desires) are no doubt, outside us. But the hook that ties them to us are with in us. If we make our mind up, we can unhook us from those strings. To reduce our indulgence is no less than salvation." - Mankutimma

Themes

Video Section

Video Coming Soon

Detailed video explanations by scholars and experts will be available soon.