Back to List

Kagga 384 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೊಟ್ಟೆಯಲಿ ಹಸಿವು, ಮನದಲಿ ಮಮತೆ - ಈ ಎರಡು । ಗುಟ್ಟು ಕೀಲುಗಳಿಹವು ಸೃಷ್ಟಿಯಂತ್ರದಲಿ ॥ ಕಟ್ಟಿಪುವು ಕೋಟೆಗಳ, ಕೀಳಿಪುವು ತಾರೆಗಳ । ಸೊಟ್ಟಾಗಿಪುವು ನಿನ್ನ - ಮಂಕುತಿಮ್ಮ ॥ ೩೮೪ ॥

hoTTeyali hasivu, manadali mamate - ee eraDu । huTTu kIlugaLu ihavu sRuShTi yantradali ॥ kaTTipuvu kOTegaLa, kILipuvu tAregaLa । soTTAgipuvu ninna - Mankutimma ॥ 384 ॥

Meaning in Kannada

ಉದರದಲ್ಲಿರುವ ಹಸಿವು, ಮನಸ್ಸಿನಲ್ಲಿರುವ ಮಮತೆ ಈ ಎರಡೂ ಜಗತ್ತಿನಲ್ಲಿ ಸೃಷ್ಟಿಯಂತ್ರದ ಕೀಲುಗಳಂತೆ ಇವೆ. ಆಕಾಶಕ್ಕೆ ಏಣಿ ಹಾಕಿ ನಕ್ಷತ್ರಗಳ ಕಿತ್ತು ತರುವ ಸಾಹಸವನ್ನು ಮಾಡುವುದು ಈ ಹಸಿವು ಮತ್ತು ಮಮತೆಯ ಬಲದಿಂದ. ಈ ರೀತಿಮಾಡುವಾಗ, ಸಾಧ್ಯಾಸಾಧ್ಯತೆಗಳನ್ನುಮತ್ತುಯುಕ್ತಾಯುಕ್ತತೆಗಳನ್ನು ಅರಿಯದೆ ಏನೆನ್ನೋ ಮಾಡಲು ಹೋಗಿ ತನ್ನ ಬಾಳನ್ನು ಸೊಟ್ಟಗಾಗಿಸಿಕೊಳ್ಳುತ್ತಾನೆ ಎಂದು ಈ ಜಗತ್ತಿನಲ್ಲಿ ಮನುಷ್ಯನ ಪರಾಕ್ರಮವನ್ನು ಕುರಿತು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

Meaning & Interpretation

"There are two secret parts of this creation machinery - hunger and love. These strong emotions make people build forts, (look to) snatch stars from the sky. They make man ambitious. It is so strong that people are ready to give up straight ways to achieve their ambitions." - Mankutimma

Themes

NatureSocietyLove

Video Section

Video Coming Soon

Detailed video explanations by scholars and experts will be available soon.