Mankutimmana Kagga by D.V. Gundappa
ಜನಕಜೆಯ ದರುಶನಿದಿನಾಯ್ತು ರಾವಣ ಚಪಲ । ಕನಕಮೃಗದರುಶನದೆ ಜಾನಕಿಯ ಚಪಲ ॥ ಜನವವನ ನಿಂದಿಪುದು, ಕನಿಕರಿಪುದಾಕೆಯಲಿ । ಮನದ ಬಗೆಯರಿಯದದು - ಮಂಕುತಿಮ್ಮ ॥ ೩೮೩ ॥
janakajeya darushanidinAytu rAvaNa chapala । kanakamRugadarushanade jAnakiya chapala ॥ janavu avana nindipudu, kanikaripudu Akeyali । manada bage ariyadu adu - Mankutimma ॥ 383 ॥
ಸೀತೆಯನ್ನು ನೋಡಿ ರಾವಣನಿಗೆ ಅವಳನ್ನು ಪಡೆಯಬೇಕೆಂಬ ಚಪಲವಾಯ್ತು. ಆದರೆ ಸೀತೆಗೆ ಬಂಗಾರದ ಜಿಂಕೆಯನ್ನು ನೋಡಿ ಅದನ್ನು ಪಡೆಯಬೇಕೆಂಬ ಚಪಲವಾಯ್ತು. ಆದರೆ ಜನರು ಸೀತೆಗೆ ಕನಿಕರ ತೋರುತ್ತಾರೆ ಮತ್ತು ರಾವಣನನ್ನು ದುಷ್ಟನೆಂದು ಜರಿಯುತ್ತಾರೆ. ಹಾಗೆ ಭಿನ್ನವಾಗಿ ಅಭಿಪ್ರಾಯಪಡುವ ಜನರು ಮನವನ್ನು ಸರಿಯಾಗಿ ಅರಿಯದೆ ಮಾತನಾಡುತ್ತಾರೆ ಎಂದು ಜನಸಾಮಾನ್ಯರ ಮನೋಭಾವದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Ravana's desires were aroused when he saw Sita (daughter of Janaka). Sita's desires were aroused when she saw the golden deer. We all know what followed. People criticize Ravana, but sympathize with Sita - even though both gave in to their desires. No one can know how mind reacts." - Mankutimma
Video Coming Soon
Detailed video explanations by scholars and experts will be available soon.