Back to List

Kagga 382 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇಂದ್ರಿಯವ ಜಯಿಸಿದೆಯೊ? ಮಂದವೋ ನಿನ್ನಕ್ಷಿ? । ಸೌಂದರ್ಯ ಯಕ್ಷಿಣಿಯೆ ನಿನ್ನ ತೊರೆದಿಹಳೋ? ॥ ಅಂಧನೆ ವಿರಕ್ತನ್; ಅಪ್ಸರೆಯ ಕಾಣದನೆ ಯತಿ । ಕಂಡು ಕೆರಳನಾರೊ! - ಮಂಕುತಿಮ್ಮ ॥ ೩೮೨ ॥

indriyava jayisideyo? mandavO ninna akShi? । saundarya yakShiNiye ninna toredihaLO? ॥ andhane viraktan; apsareya kANadane yati । kanDu keraLanAro! - Mankutimma ॥ 382 ॥

Meaning in Kannada

ನೀನೇನು ಇಂದ್ರಿಯಗಳ ಜಯಿಸಿದ್ದೀಯೊ? ಅಥವಾ ಸೌಂದರ್ಯವನ್ನು ನೋಡುವ ಕ್ಷಮತೆಯನ್ನು ಕಳೆದುಕೊಂಡಿದ್ದೀಯೋ? ಅಥವಾ ಈ ಜಗತ್ತಿನ ಸೌಂದರ್ಯದಲ್ಲಿನಿನಗೆ ಆಸೆ ಮೂಡಿಸುವ ಆ ಯಕ್ಷಿಣಿ ನಿನ್ನನ್ನು ತೊರೆದು ಹೋಗಿದ್ದಾಳೋ? ಕಣ್ಣು ಕಾಣದವನು ಏನನ್ನೂ ನೋಡದಿದ್ದರೆ ಅವನ ಮನದೊಳಗೆ ಆಸೆಗಳು ಇಲ್ಲವೇನು? ತಪಸ್ಸಿನಲ್ಲಿ ನಿರತ ಯತಿಯು ಅಪ್ಸರೆಯನ್ನು ನೋಡದಿರುವನೆ? ಹಾಗೆ ಕಂಡೂ ಆಸೆಪಡದೆ ಇರುವವರಾರು? ಎಂದು ಅಶಾ ಪ್ರವೃತ್ತವಾದ ಮನುಷ್ಯನ ಮನಸ್ಸನ್ನು ಕುರಿತುಹತ್ತುಹಲವಾರು ಪ್ರಶ್ನೆಗಳನ್ನು, ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"When one claims to have conquered his senses (desires), one must be skeptical. Did he really conquer? or his senses have gone weak? or the lady of beauty abandoned him? A blind person is naturally inclined away from enjoying beauty. Any one can be a saint as long as he has not seen a celestal damsel. Is there anyone who can resist the temptation after seening the damsels?" - Mankutimma

Themes

Video Section

Video Coming Soon

Detailed video explanations by scholars and experts will be available soon.