Back to List

Kagga 381 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ? । ಇತರರೊಳು ವಿಷಪರೀಕ್ಷೆಗೆ ನಿಲುವರಾರು? ॥ ಮಿತಕುಕ್ಷಿ ಮಿತಭುಕ್ತ; ಮತ್ತಾರ್ ಜಿತೇಂದ್ರಿಯನು? । ಅತಿಚರ್ಚೆ ಸಲದಲ್ಲಿ - ಮಂಕುತಿಮ್ಮ ॥ ೩೮೧ ॥

atishayada adRuShTa huttim mRuta indriyanadu ala? । itararoLu vishaparIkShege niluvarAru? ॥ mitakukShi mitabhukti; mattAr jitEndriyanu? । aticharche saladalli - Mankutimma ॥ 381 ॥

Meaning in Kannada

ಜನ್ಮದಿಂದಲೇ ಇಂದ್ರಿಯ ಲಾಲಸೆ ಸತ್ತವನು ಇದ್ದರೆ, ಅದು ಅತಿಶಯದ ಅದೃಷ್ಟವಲ್ಲವೇ? ಹಾಗಲ್ಲದೆ ಘೋರ ಪರೀಕ್ಷಗೆ ಒಳಪಡುವವರಾರು? ಕಡಿಮೆ ಹಸಿವಾಗುವವನೋ ಅಥವಾ ಮಿತವಾಗಿ ಆಹಾರ ಸೇವಿಸುವವನೋ, ಯಾರು ಜಿತೇಂದ್ರಿಯರು? ಎನ್ನುವ ಪ್ರಶ್ನೆಗಳನ್ನು ತೆಗೆದು, ಈ ವಿಷಯದಲ್ಲಿ ಅತಿಯಾದ ಚರ್ಚೆ ಮಾಡಬಾರದು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Can we say that a person who is born without senses (eyes or ears) is the most fortunate? Can others (those born with senses) test the poison and still stand? If a person has less hunger and consumes less, who else can we call as the 'conquerer of senses (desires)'? There is no need to over analyze this." - Mankutimma

Themes

Society

Video Section

Video Coming Soon

Detailed video explanations by scholars and experts will be available soon.