Mankutimmana Kagga by D.V. Gundappa
ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ । ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ॥ ಇನಿತನಿತು ದಿಟಗಳಿವು-ತುಂಬುದಿಟದಂಶಗಳು । ಗಣನೀಯವವು ಬಾಳ್ಗೆ - ಮಂಕುತಿಮ್ಮ ॥ ೩೯೪ ॥
kanasu diTa; nenasu diTa; tanuvoLiha chEtanava । kanalisuva kuNisuvA habegaLella diTa ॥ initanitu diTagaLivu-tumbudiTadanshagaLu । gaNanIyavavu bALge - Mankutimma ॥ 394 ॥
ನಾವು ಕಾಣುವ ಕನಸುಗಳು, ಕಾಣುವಾಗ ನಿಜವಾಗಿರುತ್ತವೆ ಮತ್ತು ನೆನಸಿನಲ್ಲಿ ನಮಗಾಗುವ ಅನುಭವಗಳೂ ಸಹ ಸತ್ಯವಾಗಿರುತ್ತವೆ. ಆ ಕನಸು ನೆನಸುಗಳಲ್ಲಿ ಆಗುವ ಅನುಭವಗಳು ಮತ್ತು ಅವುಗಳ ಪ್ರಭಾವ ಮತ್ತು ಪರಿಣಾಮ ನಮ್ಮ ದೇಹವನ್ನು ಧರಿಸಿರುವ ಚೇತನದ ಮೇಲೆ ಖಂಡಿತ ಆಗುತ್ತದೆ. ಹೀಗೆ ಆಗುವ ಸಣ್ಣ ಸಣ್ಣ ನಿಜಗಳೆಲ್ಲ ನಮ್ಮ ಬಾಳ್ವೆಗೆ ಅವಶ್ಯಕವೆಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"The dream is real. Memories are real. Real are those feelings which incite us and make us dance to its tunes. These are small truths. All parts and pieces of the ultimate thruth. These smaller truths are also very essential for life." - Mankutimma
Video Coming Soon
Detailed video explanations by scholars and experts will be available soon.