Back to List

Kagga 378 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕುದಿ ಹೆಚ್ಚೆ ವೆಗಟಹುದು; ಕಡಿಮೆಯಿರೆ ಹಸಿನಾತ । ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ॥ ಅದರವೊಲೆ ಮನದ ಹದ, ಅದನೆಚ್ಚರದಿ ನೋಡು । ಬದುಕು ಸೊಗ ಹದದಿಂದ - ಮಂಕುತಿಮ್ಮ ॥ ೩೭೮ ॥

kudi hechche vegaTahudu; kaDimeyire hasinAta । kadaDaloDevudu hAlu; sUkshmavadara hada ॥ adaravole manada hada, adanechcharadi nODu । baduku soga hadadinda - Mankutimma ॥ 378 ॥

Meaning in Kannada

ಹಾಲನ್ನು ಕಾಯಿಸುವಾಗ ಹದವಾಗಿ ಕಾಸಿದರೆ ಅದು ಚೆನ್ನಾಗಿ ಕಾದು, ಕೆನೆಕಟ್ಟಿ, ಕುಡಿಯಲು ರುಚಿಯಾಗಿರುತ್ತದೆ. ಅದನ್ನು ಹೆಚ್ಚಾಗಿ ಕಾಯಿಸಿದರೆ ಅಡಿಕಟ್ಟಿ ಸೀದ ವಾಸನೆ ಬರುತ್ತದೆ. ಅಲ್ಲದೆ ಕಡಿಮೆಯಾಗಿ ಕಾಯಿಸಿದರೆ, ಸರಿಯಾಗಿ ಕಾಯದೆ ಹಸಿ ವಾಸನೆ ಬಂದು ಕುಡಿಯಲು ಯೋಗ್ಯವಾಗಿರುವುದಿಲ್ಲ. ಹಾಗಾಗಿ ಹಾಲನ್ನು ಹದವಾಗಿ ಕಾಯಿಸಬೇಕು. ಅದರಂತೆಯೇ ಮನಸ್ಸನ್ನೂ ಎಚ್ಚರದಿಂದ ಹದವಾಗಿಟ್ಟುಕೊಂಡು ಬಾಳನ್ನು ಬಾಳಬೇಕು ಎಂದು ಆದೇಶಿಸುತ್ತಾರೆ, ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"If you heat it more, it will get a smoky smell. If you heat it less, then it will still retain the raw smell. if you shake it more, it will get spoilt. The balance with which you should treat milk is very delicate. So is the nature of our mind. Pay careful attention to it. Life is a bliss when the mind is balanced." - Mankutimma

Themes

LifeNatureLove

Video Section

Video Coming Soon

Detailed video explanations by scholars and experts will be available soon.