Mankutimmana Kagga by D.V. Gundappa
ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು । ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ ॥ ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ । ಸುಪ್ತವಹುದೆಂತಿಚ್ಛೆ? - ಮಂಕುತಿಮ್ಮ ॥ ೩೭೯ ॥
tRuptiyariyada vAnChe, jIrNisada bhuktivolu । guptadali koLeyutte viShabIjavAgi ॥ prAptigoLipudu jIvakunmAdatApagaLa । suptavahudu entichChe? - Mankutimma ॥ 379 ॥
ತೃಪ್ತವಾಗದ ಬಯಕೆಗಳು, ಜೀರ್ಣವಾಗದ ಆಹಾರದಂತೆ, ಒಳಗೊಳಗೇ ಕೊಳೆತು ವಿಷವಾಗಿಬಿಡುತ್ತದೆ. ಆ ರೀತಿಯ ಬಯಕೆಗಳು ಜೀವವನ್ನು ಉನ್ಮಾದ ಮತ್ತು ಉದ್ರೇಕಗೊಳಿಸುತ್ತವೆ. "ಈ ರೀತಿಯ ಬಯಕೆಗಳು ಶಾಂತವಾಗಿ ಮೇಲೇಳದಂತೆ ಇರುವುದು ಎಂದೋ?" ಎಂದು ಮಾನವನ ಆಸೆಗಳ ಬಗ್ಗೆ ಒಂದು ಸುಂದರ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Desire that knows no satisfaction is similar to the food that does not get digested. It rots inside and turns into poison. They intoxicate people's mind and create restlessness. How do we lay these desires to rest? " - Mankutimma
Video Coming Soon
Detailed video explanations by scholars and experts will be available soon.