Mankutimmana Kagga by D.V. Gundappa
ಉದರ ದೈವಕೆ ಜಗದೊಳೆದುರು ದೈವವದೆಲ್ಲಿ? । ಮೊದಲದರ ಪೂಜೆ; ಮಿಕ್ಕೆಲ್ಲವದರಿಂದ ॥ ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ । ಹದದೊಳಿರಿಸುವುದೆಂತೋ? - ಮಂಕುತಿಮ್ಮ ॥ ೩೭೭ ॥
udara daivake jagadoLu eduru daivavu adelli? । modaladara pUje; mikkellavu adarinda ॥ madisuvudu ada Adarise; kudivudu nirAkarise । hadadoLu irisuvudentO? - Mankutimma ॥ 377 ॥
ಹೊಟ್ಟೆಯೊಳಗಿನ ದೈವದ ಪೂಜೆ ಮೊದಲು ಆದಮೇಲೆ ಮಿಕ್ಕೆಲ್ಲ ದೇವರುಗಳ ಪೋಜೆಯಾಗುತ್ತದೆ. ಏಕೆಂದರೆ ಆ ಹೊಟ್ಟೆಯೊಳಗಿನ ದೈವಕ್ಕಿಂತ ಮಿಗಿಲಾದ ದೈವವು ಯಾವುದೂ ಇಲ್ಲ. ಅದಕ್ಕೆ ಕೊಡಬೇಕಾದ್ದನ್ನು ಕೊಟ್ಟರೆ ಅದು ಶಾಂತವಾಗಿರುತ್ತದೆ, ಇಲ್ಲದಿದ್ದರೆ ಕೋಪಗೊಳ್ಳುತ್ತದೆ. ಅದನ್ನು ಸಮವಾಗಿರಿಸುವುದು ಹೇಗೋ ಎಂದು ಉದರ ಪೂಜೆಯ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Stomach is the first God that we should try to worship. All other Gods will come after that and only because of that. If you worship it too much, it will become powerful and control you. If you let it suffer in hunger, it will get angry. How does one maintian balance?" - Mankutimma
Video Coming Soon
Detailed video explanations by scholars and experts will be available soon.