Mankutimmana Kagga by D.V. Gundappa
ಅಂತಾನುಮಿಂತಾನುಮೆಂತೊ ನಿನಗಾದಂತೆ । ಶಾಂತೆಯನೆ ನೀನರಸು ಮನ ಕೆರಳಿದಂದು ॥ ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು । ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ॥ ೩೭೬ ॥
antAnum intAnum ento ninagAdante । shAnteyane nInu arasu mana keraLidandu ॥ santaviDutomme shikShisuta omme shishuvendu । svAntamam tiddutiru - Mankutimma ॥ 376 ॥
ನಿನ್ನ ಮನಸ್ಸು ಕೆರಳಿದಾಗ, ಹಾಗಾದರೂ ಸರಿ, ಹೀಗಾದರೂ ಸರಿ, ಹೇಗಾದರೂ ಸರಿ ನಿನಗೆ ಆದಂತೆ, ಆ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸು. ಹಠ ಮಾಡುವ ಮಗುವನ್ನು ಹಲವುಬಾರಿ ಸಮಾದಾನದಿಂದ ಮತ್ತೆ ಕೆಲಬಾರಿ ಶಿಕ್ಷೆಯಿಂದ ಶಾಂತಗೊಳಿಸುವಂತೆ, ನಿನ್ನ ಮನಸ್ಸನ್ನೂ ತಿದ್ದುತ್ತ ಇರು ಎಂದು ಒಂದು ಆದೇಶವನ್ನು ನೀಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"When your mind gets restless, you should try to find a way to placate it - like this, like that or some how. You may empathise with it once or punish it some other time. You should treat your mind like a kid and correct it without hurting it." - Mankutimma
Video Coming Soon
Detailed video explanations by scholars and experts will be available soon.