Mankutimmana Kagga by D.V. Gundappa
ಮನವನಾಳ್ವುದು ಹಟದ ಮಗುವನಾಳುವ ನಯದೆ । ಇನಿತಿನಿತು ಸವಿಯುಣಿಸುಸವಿಕಥೆಗಳಿಂದೆ ॥ ಅನುಕೂಲಿಸದು ಬರಿಯ ಕೂಗು ಬಡಿತಗಳಿನದು । ಇನಿತಿತ್ತು ಮರಸಿನಿತ - ಮಂಕುತಿಮ್ಮ ॥ ೩೭೫ ॥
manavanu ALvudu haTada maguvanu ALuva nayade । initu initu saviyuNisu savikathegaLinde ॥ anukUlisadu bariya kUgu baDitagaLinadu । initu ittu marasinita - Mankutimma ॥ 375 ॥
ಕೇವಲ ಕೂಗಾಟ ಬಡಿದಾಟಗಳಿಂದ ಅಲ್ಲದೆ, ಕೆಲವನ್ನು ಕೊಟ್ಟು ಮತ್ತೆ ಕೆಲವನ್ನು ಮರೆಸಿ, ಸ್ವಲ್ಪ ಸವಿಯಾದ ತಿನಿಸು ಮತ್ತು ಸೊಗಸಾದ ಕಥೆಗಳನ್ನು ಹೇಳಿ ಹಠಮಾಡುವ ಮಗುವನ್ನು ನಯ ವಿನಯದಿಂದ ಲಾಲಿಸಿ ಪಾಲಿಸುವಂತೆ, ಹಠಮಾರಿ ಮನಸ್ಸನ್ನೂ ಸಹ ಪಾಲಿಸಬೇಕು ಎನ್ನುವುದು ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.
"The way to rule the mind is similar to dealing with a cranky kid. One must feed sweet in small quantities by telling them interesting tales. A kid will not keep quiet by us yelling at it or spanking. It has to be consoled by giving it a little and making it forget the rest." - Mankutimma
Video Coming Soon
Detailed video explanations by scholars and experts will be available soon.