Mankutimmana Kagga by D.V. Gundappa
ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ । ಭೋಜನವ ನೀಡನೆನೆ ಮನ ಸುಮ್ಮನಿಹುದೆ? ॥ ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ । ರಾಜಯೋಗದುಪಾಯ - ಮಂಕುತಿಮ್ಮ ॥ ೩೭೪ ॥
ee jagada gandha paripari hasiva keNakuta ire । bhOjanava nIDenu ene mana summane ihude? ॥ sAjagaLa kollenuva haTayOgakinta sari । rAjayOgada upAya - Mankutimma ॥ 374 ॥
ಈ ಜಗತ್ತಿನ ಸೆಳೆತಗಳು ನಿನ್ನ ದೈಹಿಕ ಮತ್ತು ಮಾನಸಿಕ ಹಸಿವೆಗಳನ್ನು ಕೆಣಕುತ್ತಾ ಇರುವಾಗ, ಅವುಗಳ ತಣಿಸದೆ ನೀವು ಅವುಗಳಿಗೆ ಆಹಾರ ಕೊಡಲು ನಿರಾಕರಿಸಿದರೆ, ನಿನ್ನ ಮನಸು ಸುಮ್ಮನಾದೀತೆ? ಸಹಜವಾದ ಆಸೆ ಆಕಾಂಕ್ಷೆಗಳ ತುಳಿದು ಹಠ ಯೋಗವನ್ನು ಸಾಧಿಸುವುದಕ್ಕಿಂತ ಇತಿ ಮಿತಿಯ ರಾಜಯೋಗವೇ ಒಳಿತು ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"The fragrance of this world are inciting various kinds of hunger in our minds. Will the mind keep quiet if we deny it the food to satisfy the hunger? Trying to find inner peace by denying innate needs of a body is called 'haTayOga'. Instead of that, 'rAjayOga' - of being aware of the needs as well as the body's limiations is better." - Mankutimma
Video Coming Soon
Detailed video explanations by scholars and experts will be available soon.