Mankutimmana Kagga by D.V. Gundappa
ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು । ಬೇಕೆನುತ ಬೊಬ್ಬಿಡುತಲಿಹ ಘಟವನಿದನು ॥ ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ । ಸಾಕೆನಿಪುದೆಂದಿಗಲೊ - ಮಂಕುತಿಮ್ಮ ॥ ೩೭೧ ॥
bEku bEkadu bEku bEku idu enage innondu । bEkenuta bobbiDutalu iha ghaTavanu idanu ॥ Ekendu rachisidano bommanI bEku japa । sAku enipudu endige elo - Mankutimma ॥ 371 ॥
ಅದು ಬೇಕು, ಇದು ಬೇಕು, ಮತ್ತೊಂದು ಬೇಕು ಎಂದು ಸದಾಕಾಲ ಪರದಾದುವಂತಾ ಈ ದೇಹವೆಂಬ ಮಡಕೆಯನ್ನು ಏಕೆ ಸೃಷ್ಟಿಸಿದನೋ ಆ ಪರಮಾತ್ಮ? ನಮ್ಮ ಬದುಕಿನಲ್ಲಿ ಈ ‘ ಬೇಕು’ ಗಳ ಜಪ ಎಂದಿಗೆ ಕೊನೆಯಾಗುತ್ತದೋ ಎಂದು ಜಗತ್ತಿನ ಮನುಷ್ಯರ ಬದುಕಿನಲ್ಲಿ ಆಸೆಗಳ ಪರಿಯನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"I want this. I want that. I want something else. Why did the creator make this pot that always shouts 'want, want, want'? When will this chanting of 'want' turn to 'enough'?" - Mankutimma
Video Coming Soon
Detailed video explanations by scholars and experts will be available soon.