Back to List

Kagga 370 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸ್ವಾತಿ ಮಳೆಹನಿ ಬೀಳ್ವ, ಶುಕ್ತಿ ಬಾಯ್ದೆರೆದೇಳ್ವ । ಕೌತುಕದ ಸಮಯಯೋಗದೆ ಮೌಕ್ತಿಕ ಫಲ ॥ ಪ್ರೀತಿ ಸುಖ ಸತ್ಯದರ್ಶನ ಶಾಂತಿಗಳ ಹುಟ್ಟುಮ್ । ಆ ತೆರೆದ ಯೋಗದಿನೆ - ಮಂಕುತಿಮ್ಮ ॥ ೩೭೦ ॥

svAti maLehani bILva, shukti bAyi teredu ELva । kautukada samayayOgade mauktika phala ॥ prIti sukha satyadarshana shAntigaLa huTTum । A tereda yOgadine - Mankutimma ॥ 370 ॥

Meaning in Kannada

ಸ್ವಾತಿ ನಕ್ಷತ್ರದ ದಿನ ಬೀಳುವ ಮಳೆ ಬೀಳುವಾಗ, ಸಮುದ್ರದಲ್ಲಿನ ಚಿಪ್ಪು ಬಾಯ ತೆರೆದು, ಒಂದು ಮಳೆ ಹನಿಗೆ ಕಾಯುತ್ತದಂತೆ. ಹಾಗೆ ಅದರೊಳಗೆ ಬಿದ್ದ ಸ್ವಾತಿಮಳೆಯ ಒಂದು ಹನಿ ಆ ಚಿಪ್ಪಿನ ಗರ್ಭದಲ್ಲಿ ಹೊಕ್ಕಾಗ ‘ಮುತ್ತು’ ಆಗುತ್ತದಂತೆ. ಇದು ಒಂದು ಸು-ಸಂಯೋಗ. ಆ ರೀತಿಯ ಯೋಗದಿಂದಲೇ ಪ್ರೀತಿ, ಸುಖ, ಶಾಂತಿ ಮತ್ತು ಸತ್ಯದ ದರ್ಶನವಾಗುತ್ತದೆ, ಎಂದು ಯೋಗ ಮತ್ತು ಸಂಯೋಗಗಳ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತದಲ್ಲಿ.

Meaning & Interpretation

"When it rains during Swati period (star), the oyster rises to the surface and opens its mouth to get a drop of fresh water. (Popular belief says that such drops of pure water become pearls) Lot of factors have to come together in time to bear such a beautiful fruit (pearl). So are the birth of love, happiness, truth, realization and peace in our life." - Mankutimma

Themes

WisdomLifeNatureLovePeace

Video Section

Video Coming Soon

Detailed video explanations by scholars and experts will be available soon.