Mankutimmana Kagga by D.V. Gundappa
ಏಕವಾಗವೆ ದೈವಚಿತ್ತನರಚಿತ್ತಗಳು? । ಏಕೆನ್ನ ಮನವನಾಳನು ಲೋಕದೊಡೆಯಂ? ॥ ಬೇಕೆನಿಪುದೊಂದೆನಗೆ, ವಿಧಿ ಗೆಯ್ವದಿನ್ನೊಂದು । ಈ ಕುಟಿಲಕೇಂ ಮದ್ದು ?- ಮಂಕುತಿಮ್ಮ ॥ ೩೬೯ ॥
EkavAgave daivachittanarachittagaLu? । Ekenna manavanu ALanu lOkada oDeyam? ॥ bEku enipudu ondu enage, vidhi geyvudu innondu । ee kuTilake Em maddu? - Mankutimma ॥ 369 ॥
ನಮ್ಮ ಮನದ ಆಸೆ ಮತ್ತು ಆ ದೈವದ ಆಸೆ ಒಂದಾಗುವುದಿಲ್ಲವೇ? ನಮ್ಮ ಮನಸ್ಸನ್ನು ತಾನೇ ಏಕೆ ಆಳಲೊಲ್ಲ ಆ ಪರಮಾತ್ಮ? ನಮಗೆ ಒಂದು ಬೇಕೆನಿಸಿದರೆ ಅವನು ಕೊಡುವುದೇ ಬೇರೆ!! ಈ ವಿಪರ್ಯಾಸಕ್ಕೆ ಮದ್ದು ಯಾವುದಾದರೂ ಉಂಟೆ ಎಂದು ವಿಧಿಯಾಟದ ವಿಶ್ಲೇಷಣೆ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Why can the thoughts of man and God be alike? If God can control everything, why does he not make my mind tune to what he wants? My mind wants one thing. Fate give me another. What is the remedy for this treachery." - Mankutimma
Video Coming Soon
Detailed video explanations by scholars and experts will be available soon.