Back to List

Kagga 372 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವನದಿ ನಿರ್ಜನದಿ ಮೌನದಿ ತಪವನೆಸಗುವನ । ನೆನಪಿನಲಿ ಪಿಂತಿನನುಭವವುಳಿಯದೇನು? ॥ ಇವಿನೋಟ ಸವಿಯೂಟ ಕಿನಿಸು ಕರುಬುಗಳಾಟ । ಕನಲುತಿಹುವಾಳದಲಿ - ಮಂಕುತಿಮ್ಮ ॥ ೩೭೨ ॥

vanadi nirjanadi maunadi tapavam esaguvana । nenapinali pintina anubhava uLiyadEnu? ॥ ivinOTa saviyUTa kinisu kurubagaLa ATa । kanalutihuvu ALadali - Mankutimma ॥ 372 ॥

Meaning in Kannada

ನಿರ್ಜನವಾದ ಕಾಡಿನಲ್ಲಿ ಮೌನವಾಗಿ ತಪಸ್ಸನ್ನು ಮಾಡುವವನ ನೆನಪಿನಲ್ಲಿ, ಅವನ ಜೀವನದ ಹಳೆಯ ನೆನಪುಗಳು ಇರುವುದಿಲ್ಲವೇನು? ಆ ನೆನಪಿನಲ್ಲಿ ಅವನು ಅನುಭವಿಸಿದ ಸುಖ, ಕೋಪ, ದ್ವೇಷ ನೋವು ಸಂಕಟಗಳ ಹಳೆಯ ಅನುಭವಗಳು ಮನಸಿನಂತರಾಳದಲಿ ಇದ್ದೇ ಇರುತ್ತದೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"If one leaves this society and retreats to a forest, where there are no people to disturb him - and sits in silence and meditates, will he be at peace? In his memories he still carries all the experiences of the past. The beautiful sights, the tasty food, the anger, the jelousy - all these feelings will still continue to haunt and trouble him." - Mankutimma

Themes

LifeSufferingDetachmentSocietyLovePeace

Video Section

Video Coming Soon

Detailed video explanations by scholars and experts will be available soon.