Back to List

Kagga 365 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? । ಹೊದಿಸುವುದು ದೈವವೆಲ್ಲಕಮೊಂದು ತೆರೆಯ ॥ ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು । ವಿಧಿಯ ಬಗೆಯೆಂತಿಹುದೋ! - ಮಂಕುತಿಮ್ಮ ॥ ೩೬೫ ॥

adu oLitu idu keTTudemba haTa ninagEke? । hodisuvudu daivavellakamondu tereya ॥ sodeya saurabha nanjubaTTalali tOrItu । vidhiya bage entu ihudO! - Mankutimma ॥ 365 ॥

Meaning in Kannada

ಒಂದು ಒಳ್ಳೆಯದು ಅಥವಾ ಇನ್ನೊಂದು ಕೆಟ್ಟದೆಂದು ವ್ಯಾಖ್ಯಾನ ಮಾಡುವ ಹಠ ನಿನಗೆ ಏಕೆ? ಎಂದು ಅಧಿಕಾರಯುಕ್ತವಾಗಿ ಒಂದು ಪ್ರಶ್ನೆಯನ್ನು ಕೇಳುತ್ತಾ, ಆ ದೈವವು ಎಲ್ಲದರ ನಿಜಸ್ವರೂಪವನ್ನೂ ಒಂದು ತೆರೆಯ ಹಿಂದೆ ಅಡಗಿಸಿಟ್ಟಿದೆ. ಆ ವಿಧಿಯ ಕಾರ್ಯ ವೈಖರಿಯ ವಿಧಾನ ಹಲವು ಬಗೆಯಾದದ್ದು, ಏಕೆಂದರೆ ನಮಗೆ ಹಲವು ಬಾರಿ ವಿಷದ ಬಟ್ಟಲಲ್ಲಿ ಅಮೃತದ ಸುವಾಸನೆ ಅಥವಾ ಸುಗಂಧ ಸಿಗಬಹುದು ಎಂದು ನಮಗೆ ವಸ್ತು ವಿಷಯ ಅಥವಾ ವ್ಯಕ್ತಿಗಳ ನಿಜ ಸ್ವರೂಪವನ್ನು ಅರಿಯುವ ಬಗೆಯನ್ನು ವಿಶದ ಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Why are you so hardlined branding some things as good and some as bad? Fate has put a veil on everything so that you will never know the true form of anything. A bowl of poison may bear the smell of elixir. Such are the ways of illusion created by Creation." - Mankutimma

Themes

MoralityFateNature

Video Section

Video Coming Soon

Detailed video explanations by scholars and experts will be available soon.