Mankutimmana Kagga by D.V. Gundappa
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? । ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ ॥ ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ । ಸಹನೆ ವಜ್ರದ ಕವಚ - ಮಂಕುತಿಮ್ಮ ॥ ೩೬೬ ॥
grahagatiya tidduvane jOyisanu jAtakadi? । vihita Agi ihudu adara gati sRuShTi vidhiyim ॥ sahisidallade mugiyadAva dashe bandoDam । sahane vajrada kavacha - Mankutimma ॥ 366 ॥
ಜ್ಯೋತಿಷ್ಕನ ಬಳಿ ಹೋಗಿ ನಿನ್ನ ಜಾತಕವ ತೋರಿಸಿದರೆ,ಅವನಿಗೆ ನಿನ್ನ ಗ್ರಹ ಗತಿಯನ್ನು ತಿದ್ದಲು ಸಾಧ್ಯವೇ? ಇಲ್ಲ,ಏಕೆಂದರೆ ನೀ ಈ ಜಗತ್ತಿಗೆ ಬಂದಾಗಲೇ ನಿನ್ನ ಗ್ರಹಗತಿಯನ್ನು ವಿಧಿ ನಿರ್ಧರಿಸಿಬಿಟ್ಟಿದೆ. ಹಾಗಾಗಿ ಯಾವ ದೆಶೆಯಾದರೂ, ಬಂದದ್ದನ್ನು ಅನುಭವಿಸಿಯೇ ತೀರಬೇಕು. ಹಾಗೆ ಅನುಭವಿಸುವಾಗ ಬರುವ ನೋವು ಸಂಕಷ್ಟಗಳನ್ನು ಸಹಿಸಲು ನಿನಗೆ ಬೇಕಾದದ್ದು ‘ಸಹನೆ’ ಎಂಬ ‘ವಜ್ರದ ಕವಚ’ ಎಂದು ಜನರ ಭವಿಷ್ಯವನ್ನು
"Can the astrologer change your fate by fudging your horoscope? The movement of the planets follow a definite rule (independant of the astrologer). (If you believe that the planets have an effect on you, then) there is no escaping from effects the of fate in your life. One has to endure it. While doing so, patience is like a diamond (impregnable) armour." - Mankutimma
Video Coming Soon
Detailed video explanations by scholars and experts will be available soon.