Back to List

Kagga 364 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಟಿಪುದೊಮ್ಮೊಮ್ಮೆ ಮರುಕವ ದೈವ ಮನುಜರಲಿ । ಕಟುಕನಿನಿಸಕ್ಕಿಯನು ಹಕ್ಕಿಗೆರೆಚುವವೋಲ್ ॥ ತುಟಿ ಸುಟ್ಟು ರಸನೆಗೆಟುಕದ ಕೀರು ದೈವಕೃಪೆ । ತಟವಟವೊ ಸೃಷ್ಟಿದಯೆ - ಮಂಕುತಿಮ್ಮ ॥ ೩೬೪ ॥

naTipudu ommomme marukava daiva manujarali । kaTukanu inisu akkiyanu hakkige erechuva vOl ॥ tuTi suTTu rasanege eTukada kIru daivakRupe । taTavaTavo sRuShTidaye - Mankutimma ॥ 364 ॥

Meaning in Kannada

ಹಕ್ಕಿಗಳ ಕತ್ತರಿಸುವ ಮುನ್ನ ಅವುಗಳಿಗೆ ತೋರಿಕೆಯ ಕರುಣೆಯಿಂದ ಅಕ್ಕಿಯನು ಎರಚುವ ಕಟುಕನ ರೀತಿ ಅಥವಾ ರುಚಿಯಾದ ಬಿಸಿ ಹಾಲನ್ನೋ ಅಥವಾ ಪಾಯಸವನ್ನೋ ನಮ್ಮ ಮುಂದಿಟ್ಟು,ನಾವದನ್ನು ಆಸೆಯಿಂದ ಹೀರಲು ಹೋಗಿ ತುಟಿ ಸುಟ್ಟುಕೊಂಡು "ಇನ್ನು ಪಾಯಸವೇ ಬೇಡ" ಎನ್ನುವಂತೆ ಮಾಡುವ, ಮೋಸದ ಅಥವಾ ಕಪಟದ ಕರುಣೆಯೇ ಆ ದೈವ ಕೃಪೆಯೋ? ಎನ್ನುತ್ತಾರೆ ನಮ್ಮ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Every once in a while, Providence acts as if it is compassionate with us. Just like a tyrant throws grains at the bird (not with the intent to feed, but to capture it). His gifts is like milk that touch (and warms) the lips but does not reach the toungue. The favours showered on you by Creation is a mere illusion." - Mankutimma

Themes

NatureLoveWar

Video Section

Video Coming Soon

Detailed video explanations by scholars and experts will be available soon.