Mankutimmana Kagga by D.V. Gundappa
ಆತುರತೆಯೇನಿರದು ವಿಧಿಯಯಂತ್ರಚಲನೆಯಲಿ । ಭೀತತೆಯುಮಿರದು, ವಿಸ್ಮೃತಿಯುಮಿರದೆಂದುಂ ॥ ಸಾಧಿಪುದದೆಲ್ಲವನು ನಿಲದೆ, ತಪ್ಪದೆ, ಬಿಡದೆ । ಕಾತರತೆ ನಿನಗೇಕೆ? - ಮಂಕುತಿಮ್ಮ ॥ ೩೬೩ ॥
Aturate Enu iradu vidhiya yantrachalaneyali । bhItateyum iradu, vismRutiyum iradu endum ॥ sAdhipudu ellavanu nilade, tappade, biDade । kAtarate ninagEke? - Mankutimma ॥ 363 ॥
ವಿಧಿಯ ಚಕ್ರದ ಚಲನೆಯಲಿ ಆತುರವಿರದು.ಭೀತತೆಯು ಇರದು ಮತ್ತು ವಿಧಿ ಯಾವುದನ್ನೂ ಮರೆಯದೆ ತಾನು ಸಾಧಿಸಬೇಕಾದದ್ದನ್ನೆಲ್ಲ ಬಿಡದೆ ,ತಪ್ಪದೆ ಸಾಧಿಸಿಯೇ ತೀರುತ್ತದೆ. ಹಾಗಾಗಿ ಏನಾಗುವುದೋ ಎಂತಾಗುವುದೋ ಎಂಬ ಕಾತರತೆ ನಿನಗೆ ಬೇಡ ಎಂದು ಒಂದು ಕಿವಿಮಾತನ್ನು ಆದೇಶದ ರೂಪದಲ್ಲಿ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ ಹೇಳಿದ್ದಾರೆ.
"There is no anxiety (or urgency) in the running of the Providence machine. No fear. No lapse (or forgetting) ever. It will achieve and outlast everything without fail, without letting off. Why do you get restless?" - Mankutimma
Video Coming Soon
Detailed video explanations by scholars and experts will be available soon.