Mankutimmana Kagga by D.V. Gundappa
ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು । ತೇಲುತ್ತ ಭಯವ ಕಾಣದೆ ಸಾಗುತಿರಲು ॥ ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ । ಮೇಲ ಕೀಳಾಗಿಪುದು - ಮಂಕುತಿಮ್ಮ ॥ ೩೬೨ ॥
kAlanadiyali namma bALadONiyu meredu । tElutta bhayava kANade sAguta iralu ॥ gALi yAvagamo bandu ettaNino bIsuta । mEla kELu Agipudu - Mankutimma ॥ 362 ॥
ಅವ್ಯಾಹತವಾಗಿ ಹರಿಯುವ ‘ಕಾಲ’ವೆಂಬ ನದಿಯಲ್ಲಿ ನಾವು ನಮ್ಮ ‘ ಬಾಳು’ ಎಂಬ ದೋಣಿಯಲ್ಲಿ ಕುಳಿತು ಭಯವಿಲ್ಲದೆ, ಮೆರೆಯುತ್ತಾ ಸಾಗುತ್ತಿರಲು, ಎಲ್ಲಿಂದಲೋ ಒಂದು ಬಿರುಗಾಳಿ ಬೀಸದಂತೆ ಆಗಿ, ಕಷ್ಟಗಳ ಸಂಕೋಲೆಗಳಲ್ಲಿ ಸಿಲುಕಿ ನಮ್ಮ ಬಾಳ ದೋಣಿ ತಲೆಕೆಳಗಾಗುತ್ತದೆ ಎಂದು ಉಲ್ಲೇಖ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"In this river of time, our boat of life is sailing well. We are very happy. We know no fear. But a gust of wind from somewhere can wipe us off and topple us any time. Everything that was held high will have to lay low then." - Mankutimma
Video Coming Soon
Detailed video explanations by scholars and experts will be available soon.