Mankutimmana Kagga by D.V. Gundappa
ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ । ನಿಲ್ಲದಾಡುತ್ತಿಹುದು ಯಂತ್ರ ಕೀಲುಗಳು ॥ ಎಲ್ಲಾಗುಹೋಗುಗಳುಮಾ ಚಕ್ರಗತಿಯಂತೆ । ತಲ್ಲಣವು ನಿನಗೇಕೆ? – ಮಂಕುತಿಮ್ಮ ॥ ೩೬೧ ॥
elliyO vidhiya gUDada karmashAleyali । nillade ADutta ihudu yantra kIlugaLu ॥ ella Agu hOgugaLam A chakragatiyante । tallaNavu ninagEke? - Mankutimma ॥ 361 ॥
ಬಹಳ ಗುಪ್ತವಾಗಿ ನಡೆಯುವ ವಿಧಿಯ ಕಾರ್ಯಾಂಗದಲ್ಲಿ ಜಗತ್ತಿನ ಎಲ್ಲ ಜೀವಿಗಳ ಆಗುಹೋಗುಗಳ ನಿರ್ಣಯಿಸುವ ಚಕ್ರವು ನಿರಂತರವಾಗಿ ತಿರುಗುತ್ತಿರುತ್ತದೆ. ಅದು ಗೂಡತೆಯಿಂದ ನಡೆಯುತ್ತಿದೆ ಮತ್ತು ಅದು ನಿನಗೆ ಅರ್ಥವಾಗದ ವಿಷಯವಾದದ್ದರಿಂದ,ನೀ ಏಕೆ ತಲ್ಲಣ ಪಡುತ್ತೀಯೆ? ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Some where in Providence's secret workshop there are machines and fixtures that work non-stop. All day-to-day activities are paced by that machines. Why are you becoming restless?" - Mankutimma
Video Coming Soon
Detailed video explanations by scholars and experts will be available soon.