Mankutimmana Kagga by D.V. Gundappa
ಇನ್ನೇನು ಮತ್ತೇನು ಗತಿಯೆಂದು ಬೆದರಿದರು । ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ॥ ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು । ತಣ್ಣಾಗಿರಿಸಾತ್ಮವನು - ಮಂಕುತಿಮ್ಮ ॥ ೩೬೦ ॥
innEnu mattEnu gatiyendu bedarade iru । ninna kai oLage ihude vidhiya lekkaNike? ॥ kaNNige eTukade sAguta ihudu daivada sanchu । taNNAge irisu Atmavanu - Mankutimma ॥ 360 ॥
ನೀ ನಿನ್ನ ಪರಿಸ್ಥಿತಿಗೆ ಹೆದರಿ ‘ಅಯ್ಯೋ ಇನ್ನೇನು ಗತಿ’ಎಂದು ಕೊರಗದಿರು, ಏಕೆಂದರೆ ನಿನ್ನ ಹಣೆಬರಹವನ್ನು ಬರೆಯುವ ಲೇಖನಿ(pen) ನಿನ್ನ ಕೈಯಲ್ಲಿ ಇಲ್ಲ. ಅದು ವಿಧಿಯ ಕೈಯಲ್ಲಿ ಇದೆ. ಆ ದೈವ, ವಿಧಿಯ ಮೂಲಕ ನಡೆಸುವ ನಮ್ಮ ಜೀವನದ ಪಾತ್ರವನ್ನು ಬಹಳ ಉಪಾಯವಾಗಿ, ನಮಗೆ ಅರ್ಥವಾಗದ ರೀತಿಯಲ್ಲಿ ಬರೆಸಿ,ನಡೆಸುತ್ತದೆ. ಆದ್ದರಿಂದ’ನಿನ್ನ ಆತ್ಮವನ್ನು ತಣ್ಣಗಿರಿಸಿಕೋ’ಎಂದು ಅದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Don't get restless by thinking about the future. Many things are not under your control. You will not know what fate has in store for you. His plan is something that you can not see. Placate your mind and be happy. (after putting your best efforts at any endeavor)" - Mankutimma
Video Coming Soon
Detailed video explanations by scholars and experts will be available soon.