Mankutimmana Kagga by D.V. Gundappa
ಸೊಟ್ಟುಗಳ ನೆಟ್ಟಗಾಗಿಪ ಯತ್ನ ಲೋಕದಲಿ । ಸೃಷ್ಟಿಯಾದಿಯಿನಾಗುತಿಹುದು; ಫಲವೇನು? ॥ ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು । ಮಟ್ಟಸವೆ ತಿರೆಹರಿವು? - ಮಂಕುತಿಮ್ಮ ॥ ೩೫೯ ॥
soTugaLa neTTage Agipa yatna lOkadali । sRuShTi Adiyan Aguta ihudu; phalavEnu? ॥ hoTTe nOvu iLiyuta ire raTTe nOvu ennuvudu । maTTasave tireharivu? - Mankutimma ॥ 359 ॥
ಸೊಟ್ಟುಗಳನ್ನು ನೆಟ್ಟಗೆ ಮಾಡುವ ಪ್ರಯತ್ನವು ಪ್ರಪಂಚದ ಆದಿಯಿಂದ ನಡೆದಿದೆ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ಹೊಟ್ಟೆ ನೋವೆಂದು ಔಷಧಿ ತೆಗೆದುಕೊಂಡರೆ ಮತ್ತೆ ಬುಜ ನೊವಾಗುತ್ತದೆ. "ಈ ಪ್ರಪಂಚದಲ್ಲಿ ಅಥವಾ ಭೂಮಿಯಲ್ಲಿ ಯಾವುದೂ ಸಮನಾಗಿಲ್ಲ ಅಲ್ಲವೇ" ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Even since the beginning of the creation, people are trying to straighten the crooked things in this nature. What is the result? If the stomach ache subsides, the arm starts hurting. It is like trying to fill a hole in earth by digging elsewhere." - Mankutimma
Video Coming Soon
Detailed video explanations by scholars and experts will be available soon.