Back to List

Kagga 358 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇದು ನಡೆಯಲಿಲ್ಲವದು ನಿಂತುಹೋಯಿತೆನುತ್ತ । ಎದೆಯುಬ್ಬೆಗವನೊಂದಿ ಕುದಿಯುತಿಹುದೇಕೋ? ॥ ಅಧಿಕಾರಪಟ್ಟವನು ನಿನಗಾರು ಕಟ್ಟಿಹರು? । ವಿಧಿಯ ಮೇಸ್ತ್ರಿಯೇ ನೀನು? - ಮಂಕುತಿಮ್ಮ ॥ ೩೫೮ ॥

idu naDeyalilla adu nintu hOyitu enutta । ede ubbegavanu ondi kudiyuta ihudu EkO? ॥ adhikArapaTTavanu ninagAru kaTTiharu? । vidhiya mEstriyE nInu? - Mankutimma ॥ 358 ॥

Meaning in Kannada

ನೀನು ಕೆಲಸ ಕಾರ್ಯಗಳನ್ನು ಮಾಡುವಾಗ ಕೆಲವು ಕೆಲಸಗಳು ಅಂದುಕೊಂಡಹಾಗೆ ನಡೆಯಲಿಲ್ಲವೆಂದು ಅಥವಾ ಕೆಲವು ಕೆಲಸಗಳು ನಿಂತುಹೋಯಿತೆಂದು ಹೃದಯದೊಳಗೆ ಉದ್ವೇಗವನ್ನು ತುಂಬಿಕೊಂಡು ಮಾನಸಿಕ ಕುದಿತವೇಕೆ? ಹಾಗೆ ಕುದಿಯುವ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನೀನೇನು ವಿಧಿಯನ್ನು ನಿಯಂತ್ರಿಸುವ ಮೇಲ್ವಿಚಾರಕನೇನು? ಎಂದು ಮನುಷ್ಯರು ಪ್ರಾಕೃತ ಭಾವದಿಂದ ಪಡುವ ಅನುಭವವನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Many a work in our daily schedule will not pan out the way we want it to. Some don't progress. Others may have have come to a full stop. Why does your heart get excited and boil? Who gave you the role of setting things right in this world? Are you the mason appointed by God to run this world?" - Mankutimma

Themes

DevotionLifeMoralitySocietyLoveDuty

Video Section

Video Coming Soon

Detailed video explanations by scholars and experts will be available soon.