Mankutimmana Kagga by D.V. Gundappa
ಧಾತನೆಣ್ಣೆಯಗಾಣದೆಳ್ಳುಕಾಳಲೆ ನೀನು? । ಆತನೆಲ್ಲರನರೆವನ್; ಆರನುಂ ಬಿಡನು ॥ ಆತುರಂಗೊಳದೆ ವಿಸ್ಮೃತಿಬಡದುಪೇಕ್ಷಿಸದೆ । ಘಾತಿಸುವನೆಲ್ಲರನು - ಮಂಕುತಿಮ್ಮ ॥ ೩೫೭ ॥
dhAtana eNNEya gANada eLLu kALu ale nInu? । Atanu ellaran arevan; Aranum biDanu ॥ AturangoLAde vismRutibaDade upEkShisade । ghAtisuvanu ellaranu - Mankutimma ॥ 357 ॥
ನಮಗೆ ಈ ಬದುಕನ್ನು ಕೊಟ್ಟ ದಾತನು ಎಂದರೆ ಆ ಪರಮ ಪುರುಷ ನಮ್ಮನ್ನು ಜೀವನವೆಂಬ ಗಾಣದಲ್ಲಿ ಎಳ್ಳಿನ ಕಾಳುಗಳಂತೆ ಅರೆಯುತ್ತಾನೆ. ಯಾರಿಗೂ ಈ ಅರೆತದಿಂದ ವಿನಾಯತಿ ಇಲ್ಲ. ನಿಧಾನವಾಗಿ ಎಲ್ಲರನ್ನೂ ನೆನಪಿನಲ್ಲಿರಿಸಿಕೊಂಡು, ಯಾರನ್ನೂ ಉಪೇಕ್ಷಿಸದೆ, ಅವರ ಅವರ ಕರ್ಮಾನುಸಾರ ಎಂತೆಂತಹ ಪೆಟ್ಟುಗಳನ್ನು ಕೊಡಬೇಕೋ ಅವುಗಳನ್ನೆಲ್ಲ ನಿಶ್ಚಯವಾಗಿ ಕೊಡುತ್ತಾನೆ ಎಂಬುದು ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.
"You are a mere sesame seed lined up for crushing in the oil mill of the Creator. He will crush every one. He will not spare any one. He will not hurry. Neither will he forget. He will not ignore his work (of crushing you). He will get to every one." - Mankutimma
Video Coming Soon
Detailed video explanations by scholars and experts will be available soon.