Mankutimmana Kagga by D.V. Gundappa
ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು । ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ॥ ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ । ಮೋಸದಾಟವೊ ದೈವ - ಮಂಕುತಿಮ್ಮ ॥ ೩೫೬ ॥
Ashe baleyanu bIsi, ninna tanneDege eLedu । ghAsi nIm baDuta bAybiDalu Ore nODi ॥ maisavari kAlnu eDavisi, guTTinali naguva । mOsada ATavo daiva - Mankutimma ॥ 356 ॥
ಆಸೆಯ ಬಲೆಯನ್ನು ನಮ್ಮ ಮೇಲೆ ಬೀಸಿ, ನಮ್ಮ ಮನಸ್ಸುಗಳಲ್ಲಿ ಆಸೆ ಚಿಗುರುವಂತೆ ಮಾಡಿ, ಆ ಆಸೆಗಳನ್ನು ಪೂರೈಸಿಕೊಳ್ಳಲು ನಾವು ಪಡುವ ಪಾಡನ್ನು ಓರೆಗಣ್ಣಿಂದ ನೋಡಿ, ನಮ್ಮ ಮೇಲೆ ಕರುಣೆಯೋ ಎಂಬಂತೆ ನಮ್ಮ ಮೈದಡವಿ ಎದ್ದುನಿಲ್ಲುವಂತೆ ಮಾಡಿ, ಮತ್ತೆ ನಮ್ಮ ಕಾಲನ್ನು ಎಡವಿಸಿ ಮರೆಯಲ್ಲಿ ನಿಂತು ನೋಡಿ ಮುಸಿ ಮುಸಿ ನಗುವ ಆ ಪರಮಾತ್ಮನದು, ಮೋಸದಾಟವೋ? ಎಂದು ವಿಡಂಬನಾತ್ಮಕ ಪ್ರಸ್ತಾಪವನ್ನು ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Fate will pull you towards it by using desire as his bait. When you are wounded and tired, it sees your from the corner of its eyes, give a pleasant look, pats your back as if to give you support. In reality is is only setting you up to trip in your next step. It is secretly smiling at you after finishing you in this devious game." - Mankutimma
Video Coming Soon
Detailed video explanations by scholars and experts will be available soon.