Mankutimmana Kagga by D.V. Gundappa
ಗುಣಿಗುಣಿಸಿ ತಿಣುಕುತ್ತ ಹೆಣಗಾಡಿ ಫಲವೇನು । ಗಣನೆಗೆಟುಕದದೊಂದಚಿಂತ್ಯವೆತ್ತಲೊ ತಾನ್ । ಅಣಗಿರ್ದು ನಿನ್ನೆಲ್ಲ ಗಣಿತಗಳನಣಕಿಪುದು । ದಣಿಯದಾ ವಿಧಿ ವಿಕಟ - ಮಂಕುತಿಮ್ಮ ॥ ೩೫೫ ॥
guNiguNisi tiNukutta heNagADi phalavEnu । gaNAnege eTukada ondu achintyavu ettalo tAn ॥ aNagirdu ninnella gaNitagaLanu aNakipudu । daNiyadA vidhi vikaTa - Mankutimma ॥ 355 ॥
ನಾವು ನಮ್ಮ ಜೀವನದ ಆಗುಹೋಗುಗಳನ್ನು ತೀವ್ರವಾಗಿ ಆಲೋಚಿಸುತ್ತಾ, ಅದರ ಬಗ್ಗೆ ಲೆಕ್ಕಾಚಾರವನ್ನು ಹಾಕುತ್ತಾ ಪರದಾಡಿದರೆ ಏನು ಪ್ರಯೋಜನ? ನಮ್ಮ ಲಕ್ಕಾಚಾರಕ್ಕೆ ಎಟುಕದ ಮತ್ತು ನಮ್ಮ ಯೋಚನೆಯ ಪರಿಧಿಯೊಳಕ್ಕೆ ನಿಲುಕದ ಒಂದು ಶಕ್ತಿ ವಿಧಿ ರೂಪದಲ್ಲಿ, ತಾನು ಹೊರಗೆ ತೋರ್ಪಡಿಸಿಕೊಳ್ಳದೆ ಇದ್ದರೂ, ನಮಗೆ ಕಾಣದೆ ಇದ್ದರೂ, ತನ್ನ ಪ್ರಭಾವವನ್ನು ಬೀರಿ ನಮ್ಮ ಎಲ್ಲ ಲೆಕ್ಕಾಚಾರವನ್ನೂ ಬುಡಮೇಲು ಮಾಡಿ, ನಮ್ಮನ್ನು ವಿಕಟ ಅಟ್ಟಹಾಸದಿಂದ ಅಣಕಿಸುತ್ತದೆ ಎಂದು ನಮ್ಮ ಬದುಕಿನಲ್ಲಿ ವಿಧಿಯಾಟದ ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"What is the use of calculating your wealth, divising new ways to earn, working hard endlesslessly? There is a force hidden somewhere that you can not imagine who will make fun of all your calculations. Providence is working tirelessly to make fun of your efforts." - Mankutimma
Video Coming Soon
Detailed video explanations by scholars and experts will be available soon.