Mankutimmana Kagga by D.V. Gundappa
ಲೋಕವೆಲ್ಲವು ದೈವಲೀಲೆಯಂಬರೆ, ಪೇಳಿ । ಶೋಕ ಸೋಂಕಿರದೊಡಾ ಲೀಲೆ ನೀರಸವೇಂ? ॥ ಮೂಕಂಗೆ ಕಳ್ ಕುಡಿಸಿ ಚೇಳ್ ಕುಟುಕಿಪಾಟವಿದು । ಏಕಪಕ್ಷದ ಲೀಲೆ - ಮಂಕುತಿಮ್ಮ ॥ ೩೪೪ ॥
lOkavellavu daivaleeleyembare, pELi । shOka sOnku iradoDA lIle nIrasavEm? ॥ mUkange kaL kuDisi chEL kuTukipa ATavidu । EkapakShada lEle - Mankutimma ॥ 354 ॥
ಈ ಜಗತ್ತೆಲ್ಲವೂ ಆ ಪರಮಾತ್ಮನ ಲೀಲಾವಿನೋದ ಎನ್ನುವ ಹೇ! ಜನರೇ, ಹೇಳಿ ಆ ಲೀಲೆಯಲ್ಲಿ ದುಃಖದ ಲೇಪನ ಇಲ್ಲದಿದ್ದಿದ್ದರೆ ಈ ಜೀವನವೇನು ನೇರಸವಾಗಿಬಿಡುತ್ತಿತ್ತೆ? ಮಾತನಾಡಲಾಗದವನಿಗೆ ಹೆಂಡವನ್ನು ಕುಡಿಸಿ ನಂತರ ಚೇಳಿನಿಂದ ಕಚ್ಚಿಸುವಂತೆ, ಇದೊಂದು ಏಕಪಕ್ಷೀಯವಾದ ಲೀಲೆ ಆ ಪರಮಾತ್ಮನದು ಎಂದು, ಜಗತ್ತಿನಲ್ಲಿ ಜನರ ಜೀವನದ ಪರಿಯನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"We say that the whole world is a divine game. In this game, there is no loser and hence there must be no sorrow. Eventhough there is no loser, the game is still interesting. It is like getting a dumb person (who cannot speak) drunk and letting a scorpion bite him. He can not tell any one about his pain. But is jumping around. People think he is jumping/dancing because of the liquor and laugh at him. Only God is amusing himself." - Mankutimma
Video Coming Soon
Detailed video explanations by scholars and experts will be available soon.