Back to List

Kagga 353 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಏನಾದೊಡೇನು? ನೀನೆಲ್ಲಿ ಪೋದೊಡಮೇನು? । ಪ್ರಾಣವೇಂ ಮಾನವೇನಭ್ಯುದಯವೇನು? ॥ ಮಾನವಾತೀತವೊಂದೆಲ್ಲವನು ನುಂಗುವುದು । ಜಾನಿಸಿದನಾವಗಂ - ಮಂಕುತಿಮ್ಮ ॥ ೩೫೩ ॥

Enu AdoDe Enu? nInelli pOdoDame Enu? । prANavEM mAnavEm abhyudayavEnu? ॥ mAnavAItavu ondu ellavanu nunguvudu । jAnisu idan Avagam - Mankutimma ॥ 353 ॥

Meaning in Kannada

ಏನಾದರೇನು? ಎಲ್ಲಿ ಹೋದರೇನು? ನಿನ್ನ ಪ್ರಾಣವು, ಮಾನವು ಮತ್ತು ಉದ್ಧಾರವೂ ಒಂದು ಅತಿಮಾನವ ಶಕ್ತಿಯ ಅಧೀನದಲ್ಲಿರುವುದರಿಂದ ನೀನು " ನಾನು ಪರಮಾತ್ಮಾಧೀನ" ಎಂದು ಅರಿತು ಅದನ್ನು ಕುರಿತು ಧ್ಯಾನಿಸು ಎಂದು ಅಪ್ಪಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Many interesting things may happen. You may go to many places. You may be alive, well respected and prosperous. What good are all this when they are all controlled by something beyond all human understanding (God) and will finally finish them all. Always keep thinking about that." - Mankutimma

Themes

DevotionWisdomDeathMoralityPeace

Video Section

Video Coming Soon

Detailed video explanations by scholars and experts will be available soon.