Mankutimmana Kagga by D.V. Gundappa
ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳೊ । ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ॥ ಹಿಟ್ಟಿಗಗಲಿದ ಬಾಯಿ, ಬಟ್ಟೆಗೊಡ್ಡಿದ ಕೈಯಿ । ಇಷ್ಟೆ ನಮ್ಮೆಲ್ಲ ಕಥೆ - ಮಂಕುತಿಮ್ಮ ॥ ೩೫೨ ॥
hoTTerAyana nityadaTTahAsavo bALu । dhRuShTa dhaNiyULigake soTTu maibAgu ॥ hiTTigagalida bAyi, baTTegoDDida kaiyi । iShTe nammella kathe - Mankutimma ॥ 352 ॥
ನಮಗೆ ಪ್ರತಿ ನಿತ್ಯ ಹಸಿವಾಗುವುದು. ಹೊಟ್ಟೆಪಾಡಿಗಾಗಿ ಮತ್ತು ನಮ್ಮ ಜೀವನದ ಇತರೆ ಅವಶ್ಯಕತೆಗಳಿಗೆ ನಮಗಿಂತ ಬಲಿಷ್ಟನಾದವನ ಬಳಿ ಊಳಿಗ ಮಾಡುವುದು, ಮೈ ಬಗ್ಗಿಸಿ ದುಡಿಯುವುದು ಮತ್ತು ಅವನು ನೀಡುವ ಹಣಕ್ಕೆ ಕೈ ಒಡ್ಡುವುದು, ಇಷ್ಟೇ ನಮ್ಮ ಎಲ್ಲರ ಜೀವನದ ಕಥೆಯೂ ಎಂದು ಬದುಕಿನ ವಾಸ್ತವಿಕತೆಗೆ ಕನ್ನಡಿಯಂತೆ ನುಡಿದಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Our life is nothing but the daily antics of the Stomach. Because of this Stomach, we are ready to bend our body (back) to work for a wealthy master. Our mouth opens as soon as it sees food (for the sake of the Stomach). To keep the Stomach filled, we beg for clothes from the master. The hand automatically stretches out for the alms. Thus is all our stories." - Mankutimma [Translator's note: Stomach capitalized to treat him like a person.]
Video Coming Soon
Detailed video explanations by scholars and experts will be available soon.